ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್...!!
ಚಿನ್ನದ ಬೆಲೆಯಲ್ಲಿ 650 ರೂ. ಹಾಗೂ ಬೆಳ್ಳಿ ಬೆಲೆಯಲ್ಲಿ 600 ರೂ. ಇಳಿಕೆಯಾಗಿದೆ. ವಿವಿಧ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರುಗತಿಯತ್ತಲೇ ಸಾಗಿತ್ತು.
ಆಭರಣ ತಯಾರಕರು ಮತ್ತು ಖರೀದಿದಾರರಿಂದ ಬೇಡಿಕೆ ಕಡಿಮೆಯಾದ ಕಾರಣ, ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 650 ರೂ. ಕಡಿಮೆಯಾಗಿ, 31,300 ರೂ.ಗೆ ಇಳಿದಿದೆ. ದೆಹಲಿಯಲ್ಲಿ ಶೇ. 99.9 ಶುದ್ಧತೆಯ 10 ಗ್ರಾಂ ಚಿನ್ನಕ್ಕೆ 31,300 ರೂ., ಶೇ. 99.5 ಶುದ್ಧತೆಯ 10 ಗ್ರಾಂ ಚಿನ್ನಕ್ಕೆ 31,150 ರೂ. ಗೆ ಇಳಿಕೆಯಾಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಕೆ.ಜಿ. ಬೆಳ್ಳಿಗೆ 600 ರೂ. ಕಡಿಮೆಯಾಗಿದ್ದು, 39,150 ರೂ. ಗೆ ಇಳಿದಿದೆ.
Comments