ಕಾಂಗ್ರೆಸ್ ಗೆ ಮುಳುವಾಗಲಿದೆ ಮೋದಿ ಬಗ್ಗೆ ಸಿ.ಎಂ ಇಬ್ರಾಹಿಂ ನೀಡಿರುವ ಈ ಹೇಳಿಕೆ

ಪ್ರಧಾನಿ ಮೋದಿ ಅವರ ಬಗ್ಗೆ ವಿಧಾನಸಭಾ ಪರಿಷತ್ ಸದ್ಯಸ ಸಿ.ಎಂ ಇಬ್ರಾಹಿಂ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಈ ಮುಂಡೇದು ಬರೀ ಮಾತನಾಡುತ್ತಿದೆ ಹೊರತು ಕೆಲಸ ಮಾಡುತ್ತಿಲ್ಲ. ಭಾಷಣದಲ್ಲಿ ಕೇವಲ ಖಾಲಿ ದಿನ್, ಪರಿವರ್ತನ್ ಆಯೆಗೆ, ಅಚ್ಛೇ ದಿನ್ ಆಯೆಗೆ ಅಂತ ಹೇಳೋದೇ ಆಯ್ತು. ಆದರೇ ಅಚ್ಛೇ ದಿನ್ ಅರ್ಥನೆ ಬದಲಾಗಿದೆ. ಅಂತ ಹೇಳಿದ್ದಾರೆ .ಅವರು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದರು ಇದೇ ವೇಳೆ ಮಾತನಾಡಿದ ಅವರು ಸಿ.ಎಂ ಇಬ್ರಾಹಿಂ 'ಪಾಪ ಮನೋಹನ್ ಸಿಂಗ್ ಮಾತನಾಡುತ್ತಿರಲಿಲ್ಲ ಕೆಲಸ ಮಾಡುತ್ತಿದ್ದರು ಅಂತ ತಮ್ಮ ಪಕ್ಷದ ಮಾಜಿ ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ಮಾತನಾಡುತ್ತ ತರಕಾರಿ ಮಾರುವ ಗಂಗಮ್ಮ ಡೆಬಿಟ್ ಕ್ರೆಡಿಟ್ ಕಾರ್ಡ್ ಕೊಟ್ರೆ ಎಲ್ಲಿ ಇಡಬೇಕು. ಮೀನು ಮಾರುವ ಹುಸೇನ್ ಸಾಬಿಗೆ ಕಾರ್ಡ್ ಕೊಟ್ರೆ ಮೀನಿನ ಬಾಯಲ್ಲಿ ಹಿಡೋಕೆ ಆಗುತ್ತಾ. ದಯವೇ ಧರ್ಮದ ಮೂಲವಯ್ಯ ಅಂತ ಬಸವಣ್ಣ ಹೇಳಿದ್ದಾರೆ,ಎಂದು ಟಾಂಗ್ ನೀಡಿದರು.
Comments