ಗೂಗಲ್ ಕಂಪೆನಿಯತ್ತ ಜನರ ದೃಷ್ಟಿ .! ಯಾಕೆ ಗೊತ್ತಾ ?
ನಮ್ಮ ಜೀವನವು ನೈಜ ಪ್ರಪಂಚಕ್ಕಿಂತ ಗೂಗಲ್ ಮೂಲಕ ಇತರರ ವ್ಯಾಪಾರದ ಪಾಲಾಗುತ್ತಿದೆಯೇ ಎಂಬ ಅನುಮಾನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.
ಗೂಗಲ್ ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ : ನಾವು ಇಂಟರ್‌ನೆಟ್ ಮೂಲಕ ಹುಡುಕುವ ಪ್ರತಿಯೊಂದು ವಿಷಯವನ್ನು ಕೂಡ ಗೂಗಲ್ ತನ್ನ ಸಾಧನಗಳಲ್ಲಿ ಸಂಗ್ರಹಿಸುತ್ತಿದೆ. ಈ ಡೇಟಾವೆಲ್ಲ ಗೂಗಲ್ ಕಂಪೆನಿಯ ಪ್ರತ್ಯೇಕ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ. ಇದರಿಂದಾಗಿ, ನಮ್ಮ ಫೋನ್ ಇತಿಹಾಸವನ್ನು ನಾವು ತೆರವುಗೊಳಿಸಲು ಸಾಧ್ಯವಿಲ್ಲ.
ಪ್ರತಿ ಆಪ್ ಮಾಹಿತಿ ಸಂಗ್ರಹಿಸುತ್ತದೆ :ನಾವು ನಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಸುವ ಪ್ರತಿಯೊಂದು ಆಪ್ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತದೆ ಎನ್ನಲಾಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವ ಆಪ್‌ಗಳನ್ನು ಎಷ್ಟು ಬಾರಿ ಬಳಸುತ್ತೇವೆ, ನಾವು ಯಾವಾಗ ಆ ಆಪ್‌ಅನ್ನು ಬಳಸುತ್ತೇವೆ, ನಾವು ಯಾವ ಜಾಗದಲ್ಲಿ ಆ ಆಪ್ ಅನ್ನು ಬಳಸುತ್ತೇವೆ ಎಂಬ ಮಾಹಿತಿಗಳನ್ನು ಗೂಗಲ್ ಸಂಗ್ರಹಿಸುತ್ತದೆ.
ಯೂಟ್ಯೂಬ್ ಹುಡುಕಾಟ ಸಂಗ್ರಹ :ಇಂಟರ್‌ನೆಟ್ ಬಳಸುಗ ಶೇ 80 ರಷ್ಟು ಜನರು ಯೂಟ್ಯೂಬ್ ವಿಡಿಯೋ ತಾಣವನ್ನು ಬಳಸುತ್ತಾರೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಾ? ನಮ್ಮ ಎಲ್ಲಾ ಯೂಟ್ಯೂಬ್ ಹುಡುಕಾಟದ ಇತಿಹಾಸವನ್ನು ಗೂಗಲ್ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಮ್ಮ ರಾಜಕೀಯ ಆದ್ಯತೆಗಳು, ಧಾರ್ಮಿಕ ನಂಬಿಕೆಗಳು, ನಮ್ಮ ವ್ಯಕ್ತಿತ್ವ ಪ್ರಕಾರ ವಿಡಿಯೋಗಳನ್ನು ತೋರಿಸುತ್ತದೆ.
ಗೂಗಲ್ ಟೇಕ್‌ಔಟ್ ಡಾಕ್ಯುಮೆಂಟ್ : ಫೇಸ್‌ಬುಕ್‌ನಂತೆಯೇ ಗೂಗಲ್ ಕೂಡ ನಮ್ಮಲ್ಲಿ ಸಂಗ್ರಹಿಸಿದ ಎಲ್ಲ ಡೇಟಾವನ್ನು ಡೌನ್ಲೋಡ್ ಮಾಡಲು ಒಂದು ಆಯ್ಕೆಯನ್ನು ಒದಗಿಸುತ್ತದೆ. ಈ ಟೇಕ್‌ಔಟ್ ಡಾಕ್ಯುಮೆಂಟ್ ಎಲ್ಲಾ ನಮ್ಮ ಇಮೇಲ್‌ಗಳು ಬುಕ್ಮಾರ್ಕ್ಗಳು, ಸಂಪರ್ಕಗಳು, ಗೂಗಲ್ ಡ್ರೈವ್ ಫೈಲ್ಗಳು, ಗೂಗಲ್ನಿಂದ ನೀವು ತಂದ ಉತ್ಪನ್ನಗಳನ್ನು, ನೀವು ಡೌನ್ಲೋಡ್ ಮಾಡಿದ ಎಲ್ಲಾ ಚಿತ್ರಗಳನ್ನು ಹೊಂದಿರುತ್ತದೆ.
Comments