ರಜೆ ಖುಷಿಯಲ್ಲಿ ಊರಿಗೆ ಹೋರಾಟ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್

ಮಹಾವೀರ ಜಯಂತಿ, ಗುಡ್ ಫ್ರೈಡೇ, ವಾರಾಂತ್ಯ ರಜೆಗಳು ಸೇರಿ ಸಾಲು ಸಾಲು ರಜೆ ಇರುವುದರಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಪ್ರಯಾಣ ದರದಲ್ಲಿ ದುಬಾರಿಯಾಗಿದೆ. ಟಿಕೆಟ್ ದರ ಹೆಚ್ಚಳ ಮಾಡಿರುವುದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆಯಾಗಲಿದೆ.
ಕೆ.ಎಸ್.ಆರ್.ಟಿ.ಸಿ. ಐಷಾರಾಮಿ ಬಸ್ ಗಳಲ್ಲಿ, ಖಾಸಗಿ ಟ್ರಾವೆಲ್ಸ್ ಗಳಲ್ಲಿ ಪ್ರಯಾಣ ದರ ಏರಿಕೆಯಾಗಿದೆ. ರಾಜ್ಯದಲ್ಲಿ ಸಂಚರಿಸುವ ಐಷಾರಾಮಿ ಬಸ್ ಗಳಿಗೆ ಶೇ. 20 ರಷ್ಟು, ಹೊರರಾಜ್ಯಗಳಿಗೆ ಸಂಚರಿಸುವ ಬಸ್ ಗಳಲ್ಲಿ ಶೇ. 50 ರ ವರೆಗೂ ಪ್ರಯಾಣದರವನ್ನು ಏರಿಕೆ ಮಾಡಲಾಗ್ತಿದೆ. ಕೆ.ಎಸ್.ಆರ್.ಟಿ.ಸಿ.ಯ ಐರಾವತ, ವೋಲ್ವೋ ಕ್ಲಬ್ ಕ್ಲಾಸ್, ಸ್ಲೀಪರ್ ಬಸ್, ಹವಾ ನಿಯಂತ್ರಿತ ಫ್ಲೈ ಬಸ್ ಹೆಚ್ಚುವರಿ ದರ ವಿಧಿಸಲಾಗ್ತಿದೆ. ಸಾಮಾನ್ಯ ದಿನಗಳ ದರಕ್ಕಿಂತ ಸುಮಾರು 200 ರೂ. ವರೆಗೂ ಪ್ರಯಾಣ ದರ ಏರಿಕೆಯಾಗಿದೆ. ಸಾಲು ರಜೆ ಮತ್ತು ಬೇಸಿಗೆ ರಜೆಯಲ್ಲಿ ಊರಿಗೆ ಹೋಗಿ ಬರುವವರ ಸಂಖ್ಯೆ ಜಾಸ್ತಿಯಾಗುವುದರಿಂದ ಖಾಸಗಿ ಬಸ್ ಗಳಲ್ಲಿಯೂ ಪ್ರಯಾಣ ದರ ದುಬಾರಿಯಾಗಿದೆ
Comments