ಸ್ಮಾರ್ಟ್‌ಫೋನ್‌ಗಳ ಮೋಟೋ ಹಬ್ಬ ದಲ್ಲಿ ಭರ್ಜರಿ ಡಿಸ್ಕೌಂಟ್‌…!!

28 Mar 2018 2:47 PM | General
461 Report

ಭಾರತೀಯ ಬಳಕೆದಾರರಿಗೆ ಮೊಟೊ ಫೆಸ್ಟ್ ಆಯೋಜಿಸಿದ್ದು, ಈ ಮೂಲಕ ತನ್ನ ಮೊಟೊ E4 ಪ್ಲಸ್, ಮೊಟೊ X4, ಮೊಟೊ G5S ಪ್ಲಸ್ ಮತ್ತು ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಮೊಟೊ E4 ಪ್ಲಸ್: ರೂ. 9999ಕ್ಕೆ ಮಾರಾಟವಾಗುತ್ತಿದ್ದ ಮೊಟೊ E4 ಪ್ಲಸ್ ಸ್ಮಾರ್ಟ್‌ಫೋನ್‌ ಅನ್ನು ರೂ. 9499ಕ್ಕೆ ಮಾರಾಟ ಮಾಡಲು ಮೊಟೊ ಮುಂದಾಗಿದ್ದು, ಮೊಟೊ ಹಬ್ ಮತ್ತು ಫ್ಲಿಪ್‌ಕಾರ್ಟಿನಲ್ಲಿ ಈ ಆಫರ್ ಲಭ್ಯವಿದೆ.

ಮೊಟೋ X4: 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿರುವ ಮೊಟೊ X4 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ರೂ.3000 ಎಕ್ಸ್‌ಚೆಂಜ್ ಆಫರ್ ದೊರೆಯಲಿದ್ದು, ಇದೇ ಮಾದರಿಯಲ್ಲಿ ರೂ.20999ಕ್ಕೆ ಈ ಫೋನ್ ಮಾರಾಟವಾಗಲಿದೆ.

ಮೊಟೊ Z2 ಪ್ಲೇ: ಮೊಟೊ Z2 ಪ್ಲೇ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರೂ.6000 ಕಡಿತವನ್ನು ಕಾಣಬಹುದಾಗಿದ್ದು, ರೂ.21,999ಕ್ಕೆ ಮಾರಾಟವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗುತ್ತಿದೆ.

ಮೊಟೊ G5S : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೊಟೊ G5S ಸ್ಮಾರ್ಟ್‌ಫೋನ್ ರೂ.4000 ಕಡಿತಗೊಂಡು ರೂ.12,999ಕ್ಕೆ ಮಾರಾಟವಾಗುತ್ತಿದ್ದು, ಮೊಟೊ ಹಬ್ ಮತ್ತು ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ.

Edited By

Shruthi G

Reported By

Madhu shree

Comments