ಇಂಟರ್‌ನೆಟ್ ಬಳಕೆದಾರರಿಗೆ ಶಾಕಿಂಗ್ ಸ್ಟೋರಿ ಇಲ್ಲಿದೆ ನೋಡಿ
ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರನು ಕನಿಷ್ಟಪಕ್ಷ ಏನಿಲ್ಲವೆಂದರೂ 10 ಪಾಸ್‌ವರ್ಡ್‌ಗಳನ್ನು ಬಳಕೆ ಮಾಡುತ್ತಿರುತ್ತಾನೆ ಎನ್ನುತ್ತವೆ ವರದಿಗಳು. ಎಟಿಎಂ, ಸ್ಮಾರ್ಟ್‌ಪೋನ್, ಫೇಸ್‌ಬುಕ್, ಟ್ವಿಟರ್, ಬ್ಯಾಂಕಿಂಗ್ ಮತ್ತು ಗೂಗಲ್ ಹೀಗೆ ಒಂದೊಂದು ವ್ಯವಸ್ಥೆಗೂ ಒಂದೊಂದು ವಿವಿಧ ರೀತಿಯ ಪಾಸ್‌ವರ್ಡ್ ಅನ್ನು ಬಹುತೇಕರು ಇಟ್ಟುಕೊಂಡಿರುತ್ತಾರೆ.
50 ಲಕ್ಷ ಜನರ ಮಾಹಿತಿ ಸೋರಿಕೆ : ಇತರರು ಊಹಿಸಲಾಗದ ಪಾಸ್‌ವರ್ಡ್‌ಗಳನ್ನು ಬಳಸದಿರುವುದರಿಂದ ಸುಮಾರು 50 ಲಕ್ಷ ಜನರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಡೇಟಾ ಸ್ಲ್ಯಾಶ್ ತಿಳಿಸಿದೆ.
ಆರು ಗಂಟೆಯಲ್ಲಿ ಹ್ಯಾಕ್ ಮಾಡಬಹುದು : ಶೇ 90ರಷ್ಟು ಉದ್ಯೋಗಿಗಳು ತಮ್ಮ ಖಾತೆಗಳು ಮತ್ತು ಸಾಧನಗಳಿಗೆ ಬಳಸುತ್ತಿರುವ ಪಾಸ್‌ವರ್ಡ್‌ಗಳು ಕೇವಲ ಆರು ಗಂಟೆಯಲ್ಲಿ ಹ್ಯಾಕಿಂಗ್‌ಗೆ ಗುರಿಯಾಗುತ್ತವಂತೆ.
ಸಾಕು ಪ್ರಾಣಿಯೇ ಪಾಸ್‌ವರ್ಡ್ :ಕುಟುಂಬ ಸದಸ್ಯರ ಹೆಸರುಗಳಿಗಿಂತ ಹೆಚ್ಚಾಗಿ ತಮ್ಮ ಸಾಕು ಪ್ರಾಣಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ಗಳಾಗಿ ಬಳಸಿಕೊಳ್ಳಲು ಹಲವು ನೆಟ್ ಬಳಕೆದಾರರು ಆಸಕ್ತಿ ತೋರಿಸುತ್ತಿದ್ದಾರಂತೆ.
ನಾಲ್ಕೈದು ಕಡೆ ಬಳಕೆ : ಶೇ 60 ರಷ್ಟು ನೆಟ್ ಬಳಕೆದಾರರು ಒಂದೇ ರಹಸ್ಯ ಪದವನ್ನು ನಾಲ್ಕೈದು ಕಡೆ ಬಳಸುತ್ತಿದ್ದಾರೆ.
ತಿಂಗಳಿಗೊಮ್ಮೆ ಪಾಸ್‌ವರ್ಡ್ ಚೇಂಜ್ : ಕೇವಲ ಶೇ 37ರಷ್ಟು ಮಂದಿ ಮಾತ್ರ ತಿಂಗಳಿಗೊಮ್ಮೆ ಪಾಸ್‌ವರ್ಡ್ ಬದಲಾಯಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಮನೆ ಹೆಸರೇ ಪಾಸ್‌ವರ್ಡ್ :ಶೇ 25ರಷ್ಟು ಮಂದಿ ತಮ್ಮ ಮನೆ ಹೆಸರನ್ನೇ ಪಾಸ್‌ವರ್ಡ್ ಮಾಡಿಕೊಂಡಿದ್ದಾರಂತೆ.ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು.
Comments