ಎಟಿಎಂ ಕಾರ್ಡ್ ಬಳಕೆದಾರರೇ ಎಚ್ಚರ ಕಟ್ಟೆಚ್ಚರ...!!
ಕಳೆದ ವಾರ ಮುಂಬೈ ಮೂಲದ ಚಿಕಿತಾ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು. ಇಷ್ಟು ಮೊತ್ತದ ಹಣವನ್ನು ನೀವು ದೆಹಲಿಯಲ್ಲಿ ವಿತ್ ಡ್ರಾ ಮಾಡಿದ್ದೀರೆಂದು. ಆದರೆ ಆಕೆ ಇದ್ದಿದ್ದು ಮುಂಬೈನಲ್ಲಿ. ಅದೂ ಆಕೆ ನಿದ್ರೆ ಮಾಡುತ್ತಿದ್ದಾಗ ದೆಹಲಿಯಲ್ಲಿ ಹೇಗೆ ಹಣ ತೆಗೆಯೋಕೆ ಸಾಧ್ಯ?
ಈಕೆಯದ್ದೊಂದೇ ಅಲ್ಲ. ದಿನವೊಂದಕ್ಕೆ ಹಲವಾರು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ನಾವು ಯಾವ್ಯಾವುದೋ ಸ್ಥಳಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಎಟಿಎಂ ಗಳಿಂದ ಹಣ ತೆಗೆದಾಗುತ್ತದೆ. ವಂಚಕರು ಹೇಗೋ ಪಿನ್ ನಂಬರ್ ಗೊತ್ತು ಮಾಡಿಕೊಂಡು ಇಂಥ ವಂಚನೆ ಮಾಡುತ್ತಲೇ ಇರುತ್ತಾರೆ.
ಹಾಗಿದ್ದರೆ ಇಂಥ ವಂಚನೆ ಗೊತ್ತಾದ ಕೂಡಲೇ ನೀವು ಏನು ಮಾಡಬೇಕು ಗೊತ್ತಾ?
ಕೂಡಲೇ ಬ್ಯಾಂಕ್ ನ ಕಸ್ಟಮರ್ ಕೇರ್ ನಂಬರ್ ಗೆ ಕಾಲ್ ಮಾಡಿ ಪ್ರಕರಣ ದಾಖಲಿಸಿ.
ಕೆಲವೊಮ್ಮೆ ಪೊಲೀಸ್ ಕೇಸ್ ದಾಖಲಿಸಲೂ ಸಹ ಬ್ಯಾಂಕ್ ಹೇಳಬಹುದು.
ಇಂಟರ್ನಲ್ ಬ್ಯಾಂಕಿಂಗ್ ಒಂಬುಡ್ಸ್ ಮನ್ ಗಳಿಗೂ ನೀವು ತಿಳಿಸಬಹುದು.
ಕಸ್ಟಮರ್ ಕೋರ್ಟ್ ಗೂ ನೀವು ಪ್ರಕರಣ ದಾಖಲಿಸಬಹುದು.
Comments