ದುಬೈನಲ್ಲಿದೆ ಪ್ರಪ್ರಥಮ ಸಿಬ್ಬಂದಿ ರಹಿತ ಪುಸ್ತಕ ಮಳಿಗೆ

27 Mar 2018 6:04 PM | General
536 Report

ದುಬೈ ಮರೀನಾದಲ್ಲಿರುವ ಮರೀನಾ ವಾಕ್ ಪಕ್ಕದಲ್ಲಿರುವ ಈ ಪುಸ್ತಕ ಮಳಿಗೆಯಲ್ಲಿ ಯಾರೂ ಸಿಬ್ಬಂದಿಗಳಿಲ್ಲ. ಗ್ರಾಹಕರು ನೇರವಾಗಿ ಅಂಗಡಿ ಹೊಕ್ಕು, ತಮಗೆ ಬೇಕಿದ್ದಂತಹ ಪುಸ್ತಕಗಳನ್ನು ಖರೀದಿಸಿ ಅಲ್ಲಿರುವ ಡ್ರಾಪ್ ಬಾಕ್ಸ್ ಅಥವಾ ಪೆಟ್ಟಿಗೆಯೊಳಗೆ ಹಣ ಹಾಕಿ ನಂತರ ಪುಸ್ತಕದೊಂದಿಗೆ ಹೊರನಡೆದರಷ್ಟೇ ಸಾಕು.

ಈ ಹಣ ಪಾವತಿ ಪೆಟ್ಟಿಗೆಯನ್ನು 'ಟ್ರಸ್ಟ್ ಬಾಕ್ಸ್' ಅಥವಾ ನಂಬಿಕೆಯ ಬಾಕ್ಸ್ ಎಂದು ಹೆಸರಿಸಲಾಗಿದೆ. ಈ ಪುಸ್ತಕ ಮಳಿಗೆಯ ಮಾಲಕ ಮೊಂಟಸೆರ್ರಟ್ ಮಾರ್ಟಿನ್ ಎಂಬವರಾಗಿದ್ದು ಅವರು ಎಮಿರೇಟ್ಸ್ ಉದ್ಯಮಿ ಮುಹಮ್ಮದ್ ಅಬ್ದುಲ್ಲಾ ಅಲ್ ಖುಬೈಸಿ ಅವರ ಜತೆ ಸೇರಿ ಇದನ್ನು ಮುನ್ನಡೆಸುತ್ತಿದ್ದಾರೆ. ಗ್ರಾಹಕರು ಒಂದು ವೇಳೆ ಪುಸ್ತಕಗಳನ್ನು ಖರೀದಿಸಿ ಹಣ ನೀಡದೇ ಮರಳಿದರೆ ? ಪುಸ್ತಕ ಮಳಿಗೆ ಮಾಲಕರಿಗೆ ಈ ಬಗ್ಗೆ ಚಿಂತೆಯಿಲ್ಲ.

ಹಾಗೇನಾದರೂ ಆದರೂ ನಾನು ಕೇವಲ 300 ದಿರ್ಹಂ ಕಳೆದುಕೊಳ್ಳಬಹುದು. ಸಿಬ್ಬಂದಿಗಳನ್ನು ನೇಮಿಸಿದಲ್ಲಿ ಅವರ ವೇತನ, ವಿಮೆ ಮತ್ತಿತರ ಖರ್ಚು ಇದಕ್ಕಿಂತಲೂ ಅಧಿಕವಾಗುವುದು ಎಂದು ಅವರು ಹೇಳುತ್ತಾರೆ. ಮಳಿಗೆಯಲ್ಲಿನ ಪುಸ್ತಕಗಳ ಬೆಲೆ 10ರಿಂದ 20 ದಿರ್ಹಂ ತನಕ ಇದೆ. ಮಳಿಗೆಯಲ್ಲಿ 20,000ಕ್ಕೂ ಅಧಿಕ ಕಾದಂಬರಿಗಳಿವೆ. ಇಂಗ್ಲಿಷ್ ಹಾಗೂ ಅರಬಿಕ್ ಭಾಷೆಯ ಪುಸ್ತಕಗಳ ಹೊರತಾಗಿ ಇಲ್ಲಿ ಫ್ರೆಂಚ್, ಸ್ಪಾನಿಷ್, ರಷ್ಯನ್ ಹಾಗೂ ಸ್ಪೇನ್ ಭಾಷೆಗಳ ಕೃತಿಗಳೂ ಇವೆ.

 

Edited By

Shruthi G

Reported By

Madhu shree

Comments