ಯೂಟ್ಯೂಬ್ ವೀಕ್ಷಿಸುವರ ಸಂಖ್ಯೆ ಭಾರತದಲ್ಲಿ ಎಷ್ಟು ಗೊತ್ತಾ ?

ಜನರು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಗೂಗಲ್ ಎಷ್ಟು ಬೆಳೆಯುತ್ತದೆ ಎಂಬುದು ಇದಕ್ಕೆ ಉದಾಹರಣೆ ಎನ್ನಬಹುದು. ಗೂಗಲ್ ಸಂಸ್ಥೆ ನೀಡಿರುವ ಒಂದು ವರದಿ ಪ್ರಕಾರ ಭಾರತದ ಶೇ. 80 ಇಂಟರ್ನೆಟ್ ಬಳಕೆದಾರರು ಯೂಟ್ಯೂಬ್ ವೀಕ್ಷಿಸುತ್ತಿದ್ದಾರಂತೆ.
ಯೂಟ್ಯೂಬ್ನಂಥ ವಿಡಿಯೋ ಪ್ಲಾಟ್ಫಾರ್ಮ್ ಬಗ್ಗೆ ಜನರಿಗೆ ಈಗೀಗ ಆಸಕ್ತಿ ಹೆಚ್ಚಾಗುತ್ತಿದೆಯಂತೆ. ಭಾರತದಲ್ಲಿ 2014ರಲ್ಲಿ 10 ಲಕ್ಷಕ್ಕಿಂತ ಸಬ್ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್ಗಳ ಸಂಖ್ಯೆ ಕೇವಲ 16 ಮಾತ್ರ ಇತ್ತು. ಆದರೆ, 10 ಲಕ್ಷಕ್ಕಿಂತ ಸಬ್ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್ಗಳು ಈಗ 300 ಸಂಖ್ಯೆಯನ್ನು ಮೀರಿದೆ ಎಂದು ಗೂಗಲ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಇನ್ನು ಕಾಮ್ಸ್ಕೋರ್ ವಿಡಿಯೋ ಮೆಟ್ರಿಕ್ಸ್ ಮಲ್ಟಿ-ಪ್ಲಾಟ್ಫಾರ್ಮ್ ವರದಿಯಲ್ಲಿಯೂ ಯೂಟ್ಯೂಬ್ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಸಕ್ರಿಯ ಇಂಟರ್‌ನೆಟ್ ಬಳಕೆದಾರರ ಪೈಕಿ ಶೇ.85ರಷ್ಟು ಜನರು ಯೂಟ್ಯೂಬ್ ವೀಕ್ಷಿಸುತ್ತಾರಂತೆ ಮತ್ತು 2020ರ ವೇಳೆಗೆ ಇಂಟರ್ನೆಟ್ನಲ್ಲಿ ವಿಡಿಯೋ ವೀಕ್ಷಿಸಲಿರುವ ಜನರ ಪ್ರಮಾಣ 50 ಕೋಟಿ ಮೀರಲಿದೆಯಂತೆ.
Comments