ರಾಜ್ಯದ ಮೊಟ್ಟ ಮೊದಲ ಬಿಎಸ್‌ಎನ್‌ಎಲ್ 4ಜಿ ಮೊಬೈಲ್ ಟವರ್ ಉದ್ಘಾಟನೆ

ರಾಜ್ಯದ ಮೊಟ್ಟ ಮೊದಲ 4ಜಿ ಮೊಬೈಲ್ ಟವರ್ ಅನ್ನು ಕೇಂದ್ರ ರೈಲ್ವೆ ಮತ್ತು ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಉದ್ಘಾಟಿಸಿದ್ದಾರೆ. ರಾಜ್ಯದ ಮೊಬೈಲ್ ಬಳಕೆದಾರರಲ್ಲಿ ಬಿಎಸ್‌ಎನ್‌ಎಲ್ ಶೇ.14 ಪಾಲು ಹೊಂದಿದ್ದು, ಈ ವರ್ಷದ ಕೊನೆಯ ವೇಳೆಗೆ 534 ಹೊಸ 4ಜಿ ಮೊಬೈಲ್ ಟವರ್‌ಗಳನ್ನು ಕರ್ನಾಟಕ ರಾಜ್ಯದಲ್ಲಿ ಅಳವಡಿಸಲಾಗುವುದು.
ಈ ಮೂಲಕ ರಾಜ್ಯದ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ವೇಗದ ಡೇಟಾ ಸಂಪರ್ಕ ಕಲ್ಪಿಸಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ. ರಿಲಯನ್ಸ್ ಜಿಯೋ ಬಂದ ಬಳಿಕ ಉಳಿದೆಲ್ಲಾ ಖಾಸಗಿ ಮೊಬೈಲ್ ಸಂಪರ್ಕಗಳ ಸಂಖ್ಯೆ ಕಡಿತಗೊಂಡರೆ ಸರ್ಕಾರಿ ಟೆಲಿಕಾಂ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೆ ಬಿಎಸ್‌ಎನ್‌ಎಲ್ ನೀಡುತ್ತಿರುವ ಉತ್ತಮ ಸೇವೆಯೇ ಕಾರಣ ಎಂದು ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಬಿಎಸ್‌ಎನ್‌ಎಲ್ ಅನ್ನು ಕೊಂಡಾಡಿದರು. ಬಿಎಸ್‌ಎನ್‌ಎಲ್ ರಾಜ್ಯದಲ್ಲಿ ಈ ವರ್ಷ 2000 ಕೋಟಿ ರೂ. ಅದಾಯವನ್ನು ತಂದುಕೊಡುವ ನಿರೀಕ್ಷೆಯನ್ನು ಇಡಲಾಗಿದೆ. ರಾಜ್ಯದಲ್ಲಿ ಒಟ್ಟು 2,790 ಟೆಲಿಫೋನ್ ಎಕ್ಸ್‌ಚೇಂಚ್‌ಗಳು, 11 ಲಕ್ಷ ಸ್ಥಿರ ದೂರವಾಣಿ ಸಂಪರ್ಕ, 3.5 ಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕ ಹಾಗೂ 70 ಲಕ್ಷ ಮೊಬೈಲ್ ಸಂಪರ್ಕಗಳಿದ್ದು ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಅವರು ಹೇಳಿದರು.
Comments