ಭಾರತೀಯ ರೈಲ್ವೆ ಇಲಾಖೆ ಕೊಟ್ಟಿದೆ ಇಂಥದೊಂದ್ದು ಬಂಪರ್ ಆಫರ್

ಸೇವೆಗಳನ್ನು ಉತ್ತಮಗೊಳಿಸಿ ಆದಾಯ ಗಳಿಸುವ ಬಗ್ಗೆ ಜನಸಾಮಾನ್ಯರು ತಮ್ಮ ಐಡಿಯಾ ನೀಡಬಹುದು. ನಿಮ್ಮ ಐಡಿಯಾದಿಂದ ರೈಲ್ವೆ ಇಲಾಖೆಗೆ ಲಾಭವಾಗುತ್ತೆ ಎನ್ನಿಸಿದ್ರೆ ಮೊದಲ ವಿಜೇತನಿಗೆ 10 ಲಕ್ಷ ರೂಪಾಯಿ, ಎರಡನೇ ವಿಜೇತನಿಗೆ 5 ಲಕ್ಷ ರೂಪಾಯಿ, ಮೂರನೇ ವಿಜೇತನಿಗೆ 3 ಲಕ್ಷ ರೂಪಾಯಿ ಕೊನೆಯ ಹಾಗೂ ನಾಲ್ಕನೇ ವಿಜೇತನಿಗೆ 1 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.
ಸದ್ಯ ರೈಲ್ವೆ ಇಲಾಖೆ How to Raise Money For Railways To Provide Better Services ಸ್ಪರ್ಧೆ ಏರ್ಪಡಿಸಿದೆ. ಭಾರತೀಯ ರೈಲ್ವೆ ಆದಾಯ ಹೆಚ್ಚಿಸಲು ಜನರಿಂದ ಸಲಹೆ ಕೇಳಿದೆ. ನಿಮ್ಮ ಐಡಿಯಾ ಚೆನ್ನಾಗಿದ್ದರೆ ನೀವು 1 ಲಕ್ಷದಿಂದ 10 ಸಾವಿರದವರೆಗೆ ಬಹುಮಾನದ ರೂಪದಲ್ಲಿ ಹಣ ಗಳಿಸಬಹುದಾಗಿದೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವವರು https://innovate.mygov.in ಗೆ ಹೋಗಿ participate ಬಟನ್ ಕ್ಲಿಕ್ ಮಾಡಬೇಕು. ಅಲ್ಲಿ ಹೆಸರು ನೋಂದಣಿ ಮಾಡಬೇಕು. ನಂತ್ರ 1000 ಶಬ್ಧದಲ್ಲಿ ನಿಮ್ಮ ಸಲಹೆ ನೀಡಬೇಕು. ಬೇಕಾದಲ್ಲಿ ಪಿಡಿಎಫ್ ಅಟ್ಯಾಚ್ ಮಾಡಬಹುದು. ಆದ್ರೆ ಅದು 8ಎಂಬಿಗಿಂತ ಹೆಚ್ಚಿರಬಾರದು. ಮೇ 19ರೊಳಗೆ ನಿಮ್ಮ ಸಲಹೆ ಕಳುಹಿಸಲು ಅವಕಾಶವಿದೆ. ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಕಳುಹಿಸಬೇಕು.
Comments