ಕ್ರೀಡಾಪ್ರೇಮಿಗಳಿಗೆ ತಣ್ಣೀರೆರಚಿದ ರಾಜ್ಯ ವಿಧಾನಸಭೆ ಚುನಾವಣೆ

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುರಕ್ಷಿತ ಕೊರತೆ ಎದುರಾಗುವ ದೃಷ್ಟಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳನ್ನು ಶಿಫ್ಟ್ ಮಾಡಿ ಕ್ರೀಡಾಪ್ರೇಮಿಗಳಿಗೆ ತಣ್ಣೀರೆರಚಿದಂತಾಗುತ್ತದೆ ಎಂದು ಭಾವಿಸಲಾಗಿತ್ತು.
ರಾಜ್ಯ ಚುನಾವಣೆ ಐಪಿಎಲ್‍ಗೆ ಅಡ್ಡಿಯಾಗಿಲ್ಲ. ಮೇ 12 ರಂದು ಚುನಾವಣೆಯ ಮತದಿನವಾಗಿರುವುದರಿಂದ ಅಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ನಡುವೆ ನಡೆಯುವ ಪಂದ್ಯವನ್ನು ಬೇರೆಡೆಗೆ ಶಿಫ್ಟ್ ಆಗಲಿದೆ. ಮೇ 15 ರಂದು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಮೇ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‍ಸಿಬಿ ಹಾಗೂ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆಯಲಿರುವ ಪಂದ್ಯ ಎಂದಿನಂತೆ ನಡೆಯುವ ಲಕ್ಷಣಗಳಿವೆ.
Comments