ಸಣ್ಣ ಉಳಿತಾಯ ಖಾತೆದಾರರು ಓದಲೇ ಬೇಕಾದ ಸುದ್ದಿ...!

ಸರ್ಕಾರಿ ಬಾಂಡ್ ಆದಾಯ ಏರಿಕೆಯಾದ ಹಿನ್ನಲೆಯಲ್ಲಿ ಏಪ್ರಿಲ್ ನಿಂದ ಸಣ್ಣ ಉಳಿತಾಯದ ಬಡ್ಡಿ ಹೆಚ್ಚಳವಾಗಲಿದೆ. ಸರ್ಕಾರಿ ಬಾಂಡ್ ಗಳ ಆದಾಯ ಜನವರಿ 1 ರಿಂದ ಸರಾಸರಿ ಶೇ. 7.5 ರಷ್ಟು ಏರಿಕೆಯಾಗಿದೆ.
ಕಳೆದ 9 ತಿಂಗಳಲ್ಲಿ ಬಾಂಡ್ ಗಳ ಆದಾಯದಲ್ಲಿ ಏರಿಕೆಯಾಗಿರುವುದರಿಂದ ಏಪ್ರಿಲ್ -ಜೂನ್ ತ್ರೈಮಾಸಿಕ ಅವಧಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಪಿ.ಪಿ.ಎಫ್., ಎನ್.ಎಸ್.ಸಿ, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೊದಲಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಸಣ್ಣ ಉಳಿತಾಯ ಖಾತೆಗಳ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
Comments