ಜಿಯೋ ಪ್ರೈಂ ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ಸೂಚನೆ...!
ಜಿಯೋ ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ಹೊರಡಿಸಿ ಹೊಸ ಪ್ಲಾನ್ ಬಗ್ಗೆ ಸೂಚನೆ ನೀಡಲಿದೆ. ಜಿಯೋ ಕೇವಲ 99 ರೂಪಾಯಿಗೆ ಜಿಯೋ ಪ್ರೈಂ ಸದಸ್ಯತ್ವ ನೀಡಿತ್ತು.
ಒಂದು ವರ್ಷದ ಸದಸ್ಯತ್ವಕ್ಕೆ ಗ್ರಾಹಕ 99 ರೂಪಾಯಿ ಜೊತೆ 309 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಬೇಕಿತ್ತು. ಆರಂಭದಲ್ಲಿ ಮೂರು ತಿಂಗಳು ಉಚಿತ ಸೇವೆ ನೀಡಿದ್ದ ಜಿಯೋ ನಂತ್ರ ಈ ಪ್ರೈಂ ಸದಸ್ಯತ್ವ ಯೋಜನೆ ಶುರು ಮಾಡಿತ್ತು.
ಪ್ರೈಂ ಸದಸ್ಯತ್ವ ಪಡೆದ ಗ್ರಾಹಕರಿಗೆ ಸಾಮಾನ್ಯ ಗ್ರಾಹಕನಿಗಿಂತ ಜಿಯೋ ವಿಶೇಷ ಸೌಲಭ್ಯಗಳನ್ನು ನೀಡಿತ್ತು. ಪ್ರೈಂ ಸದಸ್ಯತ್ವದಲ್ಲಿ 399 ರಿಚಾರ್ಜ್ ಮಾಡಿರುವ ಗ್ರಾಹಕರು ಮಾರ್ಚ್ 31ರವರೆಗೆ 4ಜಿ ಡೇಟಾ, ಎಸ್ ಎಂಎಸ್, ವೈಸ್ ಕಾಲ್ ಸೇರಿದಂತೆ ಅನೇಕ ಸೌಲಭ್ಯ ಪಡೆಯಲಿದ್ದಾರೆ. 70 ದಿನಗಳ ಕಾಲ ಅದು ವ್ಯಾಲಿಡಿಟಿ ಹೊಂದಿದೆ.
Comments