ನಿಮ್ಮ ಹತ್ತಿರ ಈ ನೋಟು ಇದ್ಯಾ ಹಾಗಿದ್ರೆ ಈ ಸುದ್ದಿ ಓದಿ..!
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಏಕಾಏಕಿ 500 ಮತ್ತು 1000 ರೂ. ಮುಖ ಬೆಲೆಯ ನೋಟು ಬಂದ್ ಮಾಡಿದಂತೆ5 ರೂ ಮುಖ ಬೆಲೆಯ ನೋಟುಗಳನ್ನು ಕೂಡ ಬ್ಯಾನ್ ಮಾಡಿದ್ದಾರ ಎನ್ನುವ ಅನುಮಾನ ಇಲ್ಲಿ ಮೂಡುವು ಸಹಜ.
ಈ ಹಿಂದೆ 10ರೂ. ನಾಣ್ಯಕ್ಕೂ ಇದೇ ಪರಿಸ್ಥಿತಿ ಬಂದಿತ್ತು. ಇದೀಗ 5 ರೂ ನೋಟು ಕೂಡ ನಗರದಲ್ಲಿ ಚಲಾವಣೆ ನಿಂತಿರುವುದಕ್ಕೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ನಗರದ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ 5 ರೂಪಾಯಿ ನೋಟಿಗೆ ಬೆಲೆಯೇ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಈ ನೋಟು ಕೊಟ್ಟರೂ ವ್ಯಾಪಾರಿಗಳು ಅದನ್ನು ಸ್ವೀಕರಿಸುತ್ತಿಲ್ಲ.ಈ ನೋಟನ್ನು ಯಾರೂ ತೆಗೆದುಕೊಳ್ಳಲ್ಲ ಅದಕ್ಕೆ ನಾನೂ ಕೂಡ ಸ್ವೀಕರಿಸಲ್ಲ. ಗ್ರಾಹಕರು ಕೂಡ ಇದನ್ನು ಪಡೆಯಲ್ಲ. ಬ್ಯಾಂಕಿನವರು ತಗೊಳ್ತಾರೆ. ಆದರೆ ಅಲ್ಲಿಗೆ ಹೋಗಿ ಡೆಪಾಸಿಟ್ ಮಾಡಲು ಗಂಟೆ ಗಟ್ಟಲೆ ಕಾಯಬೇಕಾಗುತ್ತದೆ ಅಂತ ಸ್ಥಳೀಯ ಅಂಗಡಿ ಮಾಲೀಕರು ಬೇಸರದಿಂದ ನುಡಿಯುತ್ತಾರೆ.
Comments