ಚಿಪ್ಕೊ ಚಳವಳಿಯ 45ನೇ ವರ್ಷದ ಸಂಭ್ರಮಕ್ಕೆ ಗೂಗಲ್ ಗೌರವ
ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವುದು ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಅಣೆಕಟ್ಟು, ಉದ್ಯಮ ಹಾಗೂ ರಸ್ತೆಗಳಿಗಾಗಿ ದೊಡ್ಡ ಪ್ರಮಾಣದ ಅರಣ್ಯ ನಾಶವಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಈ ಚಳವಳಿ ಆರಂಭಿಸಲಾಗಿತ್ತು.
ಈ ಚಳವಳಿ 1973ರಲ್ಲಿ ಉತ್ತರ ಪ್ರದೇಶದಿಂದ ಆರಂಭವಾಗಿತ್ತು. ಖ್ಯಾತ ಪರಿಸರವಾದಿ ಸುಂದರ್‍ಲಾಲ್ ಬಹುಗುಣ ಇದರ ನೇತೃತ್ವ ವಹಿಸಿದ್ದರು. ಚಿಪ್ಕೊ ಎಂದರೆ ಹಿಂದಿಯಲ್ಲಿ ಬಲವಾಗಿ ನಿಲ್ಲು (ನಿಲುವಿಗೆ ಅಂಟಿಕೊಳ್ಳು) ಎಂಬ ಅರ್ಥ. ಜನ ಪರಸ್ಪರ ಕೈಜೋಡಿಸಿ ಮರಗಳನ್ನು ಸುತ್ತುವರಿದು ರಕ್ಷಣೆ ಒದಗಿಸುವ ಬದ್ಧತೆಯನ್ನು ಪ್ರದರ್ಶಿಸಿದರು. ಮರ ಕಡಿಯುವುದನ್ನು ತಪ್ಪಿಸುವ ಸಲುವಾಗಿ ಮರದ ಸುತ್ತ ಮಾನವ ಕೋಟೆ ನಿರ್ಮಾಣವಾಗಿತ್ತು.
Comments