ಆಂಡ್ರಾಯ್ಡ್ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್ ..!!
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಇತ್ತೀಚಿನ ಯಾವುದೇ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡರೂ ಆ ಅಪ್ಲಿಕೇಶನ್ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಕೇಳುತ್ತಿದೆ ಎನ್ನುತ್ತವೆ ವರದಿಗಳು. ಜನಪ್ರಿಯ ಆಪ್‌ಗಳೆಲ್ಲವೂ ಖಾಸಾಗಿ ಮಾಹಿತಿಯನ್ನು ಪಡೆಯುತ್ತಿದ್ದು, ಇದರಿಂದ ಸಣ್ಣ ಕಂಪೆನಿಗಳ ಅಪ್‌ಗಳು ಕೂಡ ಹೊರತಾಗಿಲ್ಲ ಎಂದು ರಿಪೋರ್ಟ್‌ನಲ್ಲಿ ಹೇಳಲಾಗಿದೆ.
ಬಳಕೆದಾರರಿಂದ ವಿಧಿಯಿಲ್ಲದೇ ಒಪ್ಪಿಗೆ : ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಯಾವುದೇ ಆಪ್ ಇನ್‌ಸ್ಟಾಲ್ ಮಾಡಿದರೂ ಆ ಆಪ್ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಪಡೆದುಕೊಳ್ಳಲು ಕೇಳುತ್ತದೆ. ಹೀಗೆ ಆಪ್ ಕೇಳುವ ವೇಳೆ ಅನುಮತಿ ನೀಡದಿದ್ದರೆ ಆಪ್ ಬಳಸಲು ಸಾಧ್ಯವ ಆಗುವುದಿಲ್ಲ. ಹಾಗಾಗಿ, ಎಲ್ಲಾ ಬಳಕೆದಾರರು ಹಿಂದೆ ಮುಂದೆ ನೋಡದೇ ಅವರಿಗೆ ಅನುಮತಿ ನೀಡುತ್ತಿದ್ದಾರೆ.
ಒಪ್ಪಿಗೆ ನೀಡಿದರೆ ಕಷ್ಟ : ಆಪ್‌ಸ್ಟೋರ್‌ನಲ್ಲಿರುವ ಯಾವುದೇ ಒಂದು ಆಪ್ ಅನ್ನು ಡೌನ್‌ಲೋಡ್ ಮಾಡುವಾಗ ಎಚ್ಚರವಿರಲಿ. ಒಮ್ಮೆ ಎಚ್ಚರ ಯಾವುದಾದರೂ ಸೈಬರ್ ಕ್ರಿಮಿನಲ್‌ಗೆ ಗೇಲ್ ಆಪ್ ಅನ್ನೋ ಅಥವಾ ಮನರಂಜನಾ ಆಪ್ ಅನ್ನೋ ಡೌನ್‌ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸೈಬರ್ ಅಪರಾಧಿಗಳು ಕದ್ದು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಪರಿಶೀಲನೇ ಅಗತ್ಯ : ಲಕ್ಷಾಂತರ ಆಪ್‌ಗಳಲ್ಲಿ ಯಾವ ಆಂಡ್ರಾಯ್ಡ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂಬುದಕ್ಕೆ ಆಪ್ ಬಗ್ಗೆ ಬಳಕೆದಾರರಿಂದಲೇ ಪರಿಶೀಲನೇ ಅಗತ್ಯವಾಗಿದೆ. ಫೇಸ್‌ಬುಕ್‌ನಂತಹ ಜನಪ್ರಿಯ ಕಂಪೆನಿಯಿಂದಲೇ ಮಾಹಿತಿ ಸೋರಿಕೆಯಾಗಿರುವುದರಿಂದ ನಿಮಗೆ ತಿಳಿಯದೇ ಇರುವ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ.
Comments