ಎಸ್ ಎಸ್ ಎಲ್ ಸಿ ಪಾಸಾದವರಿಗೆ ಇಲ್ಲಿದೆ ಸಿಹಿ ಸುದ್ದಿ

ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡಲು ಬಯಸಿದವರಿಗೆ ಉತ್ತಮ ಅವಕಾಶವಿದೆ. ಭಾರತೀಯ ವಾಯುಸೇನೆ 54 ಎಲ್ಡಿಸಿ, ಎಂಟಿಎಸ್, ಮೆಸ್ ಸ್ಟಾಪ್, ಪೇಂಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆ :
ಮಲ್ಟಿ ಟಾಸ್ಕಿಂಗ್ ಸ್ಟಾಫ್ / ಎಂಟಿಎಸ್: 90 ಪೋಸ್ಟ್
ಕೆಳ ವಿಭಾಗದ ಕ್ಲರ್ಕ್ / ಎಲ್ಡಿಸಿ: 06 ಪೋಸ್ಟ್
ಕುಕ್: 08 ಪೋಸ್ಟ್
ಮೆಸ್ ಸಿಬ್ಬಂದಿ: 5 ಪೋಸ್ಟ್
ಹೌಸ್ ಕೀಪಿಂಗ್ ಸ್ಟಾಫ್: 19 ಪೋಸ್ಟ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 19, 2018ರಿಂದ 30 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹತೆ : ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪಾಸಾಗಿರಬೇಕು. ಕೆಳ ವಿಭಾಗದ ಕ್ಲರ್ಕ್ ಗೆ 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ 30-35 ಶಬ್ಧವನ್ನು ಪ್ರತಿ ನಿಮಿಷಕ್ಕೆ ಟೈಪ್ ಮಾಡುವ ಅರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿ : 18 ವರ್ಷದಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ :ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೌಶಲ್ಯ, ಶಾರೀರಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ : http://careerairforce.nic.in ಗೆ ಹೋಗಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಷನ್ ತುಂಬಿ 5 ರೂಪಾಯಿ ಸ್ಟಾಂಪ್ ಅಂಟಿಸಿ ಅಲ್ಲಿ ನೀಡಿರುವ ವಿಳಾಸಕ್ಕೆ ಕಳುಹಿಸಿ.
Comments