ಇನ್ಮುಂದೆ ಕನ್ನಡ ಭಾಷೆಯಲ್ಲೂ ಸಿಗಲಿದೆ ಪಾಸ್ ಪೋರ್ಟ್

ಹೌದು ಪಾಸ್‌ಪೋರ್ಟ್‌ಗಳಲ್ಲಿ ಇದುವರೆಗೂ ವಿಶ್ವಭಾಷೆಯಾಗಿರುವ ಇಂಗ್ಲೀಷ್ ಹಾಗೂ ರಾಷ್ಟ್ರೀಯ ಭಾಷೆ ಹಿಂದಿಗೆ ಅವಕಾಶ ನೀಡಲಾಗಿತ್ತು. ಇದೀಗ ಪಾಸ್‌ಪೋರ್ಟ್‌ನಲ್ಲಿ ಕನ್ನಡ ಭಾಷೆ ಮುದ್ರಿಸುವಂತೆ ಕೋರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಪಾಸ್‌ಪೋರ್ಟ್‌ನ ಮುಖಪುಟ ಹಾಗೂ ವ್ಯಕ್ತಿಯ ವಿವರಗಳಿರುವ ಕೊನೆಯ ಪುಟದಲ್ಲಿ ಕನ್ನಡ-ಇಂಗ್ಲೀಷ್ ಹಾಗೂ ಹಿಂದಿ ಮೂರು ಭಾಷೆಯ ಮಾಹಿತಿಯನ್ನು ಮುದ್ರಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ. ಜಾಗತಿಕ ಭಾಷೆಯಾಗಿರುವ ಇಂಗ್ಲೀಷ್‌ಗೆ ಅವಕಾಶ ನೀಡಲಾಗಿದೆ.ಪಾಸ್‌ಪೋರ್ಟ್‌ನ ಮುಖಪುಟ ಹಾಗೂ ವ್ಯಕ್ತಿಯ ವಿವರಗಳಿರುವ ಕೊನೆಯ ಪುಟದಲ್ಲಿ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಮೂರೂ ಭಾಷೆಗಳನ್ನು ಒಳಗೊಂಡ ಮಾಹಿತಿಯನ್ನು ಮುದ್ರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. ಪಾಸ್‌ಪೋರ್ಟ್ ಮೇಲೆ ಹಿಂದಿ ಹಾಗೂ ಇಂಗ್ಲೀಷ್ ಬಳಸಬಹುದು. ಆದರೆ ವಿದೇಶಗಳಲ್ಲಿ ಪಾಸ್‌ಪೋರ್ಟ್‌ಗಳ ಮೇಲೆ ಸ್ಥಳೀಯ ಭಾಷೆಗಳನ್ನು ಮುದ್ರಿಸಲಾಗುತ್ತದೆ. ಹೀಗಾಗಿ ಕರ್ನಾಟಕದಲ್ಲೂ ಕನ್ನಡವನ್ನು ಮುದ್ರಿಸಬೇಕು ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮಯ್ಯ.
Comments