ಟಿ ವಿ ಖರೀದಿಸುವ ಗ್ರಾಹಕರಿಗೆ ಸಿಹಿ ಸುದ್ದಿ..!!
ಸರ್ಕಾರದ ಈ ನಿರ್ಧಾರದಿಂದ ಟಿವಿಗಳ ಬೆಲೆ ಇಳಿಕೆಯಾಗಲಿದೆ ಜೊತೆಗೆ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಅಂತಾ ಟಿವಿ ಕಂಪನಿಗಳು ಅಭಿಪ್ರಾಯಪಟ್ಟಿವೆ.
ಟಿವಿ ಪ್ಯಾನಲ್ ನ ಅತ್ಯಂತ ಪ್ರಮುಖ ಭಾಗವಾದ ಓಪನ್ ಸೆಲ್ ಮೇಲೆ ಕೇಂದ್ರ ಬಜೆಟ್ ನಲ್ಲಿ ಶೇ.10ರಷ್ಟು ಆಮದು ಸುಂಕ ವಿಧಿಸಲಾಗಿತ್ತು. ಇದರಿಂದ ಟಿವಿ ಬೆಲೆಯಲ್ಲಿ ಕಂಪನಿಗಳು ಏರಿಕೆ ಮಾಡಿದ್ದವು. ಆಮದು ಸುಂಕ ಹೆಚ್ಚಳವಾಗಿರೋದ್ರಿಂದ ಸಂಪೂರ್ಣ ಬಿಲ್ಟ್ ಇನ್ ಟಿವಿ ತರಿಸಿಕೊಳ್ಳುವುದಾಗಿಯೂ, ಇದರಿಂದ ಉದ್ಯೋಗಕ್ಕೆ ಹೊಡೆತ ಬೀಳಲಿದೆ ಅಂತಾ ಕಂಪನಿಗಳು ಹೇಳಿದ್ದವು.
ಮೇಕ್ ಇನ್ ಇಂಡಿಯಾ ಯೋಜನೆಗೂ ಇದು ಹೊಡೆತ ಕೊಡಲಿದೆ ಅನ್ನೋದನ್ನು ಅರ್ಥಮಾಡಿಕೊಂಡ ಕೇಂದ್ರ ಸರ್ಕಾರ, ಆಮದು ಸುಂಕವನ್ನು ಇಳಿಕೆ ಮಾಡಿದೆ. ಹಾಗಾಗಿ ಟಿವಿ ಮಾರಾಟದಲ್ಲಿ ಹೆಚ್ಚಳವಾಗಲಿದೆ ಅನ್ನೋ ನಿರೀಕ್ಷೆ ಕಂಪನಿಗಳಲ್ಲಿದೆ.
Comments