SSLC ಪ್ರಶ್ನೆ ಪತ್ರಿಕೆ ಲೀಕ್ ಔಟ್....?

ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಎಷ್ಟೆ ಬಿಗಿಯಾಗಿ ಪರೀಕ್ಷೆಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಿದರು ಕೂಡ ಅದಾವುದು ಫಲದಾಯಕವಾಗಿ ಕೆಲಸ ಮಾಡುವುದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅಂದ ಹಾಗೇ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾದ ಒಂದೂವರೆ ತಾಸಿನಲ್ಲೇ ಕನ್ನಡ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿರುವ ಘಟನೆ ಶುಕ್ರವಾರ ಮುದ್ದೇಬಿಹಾಳದಲ್ಲಿ ನಡೆದಿದೆ. ಬಹಿರಂಗಗೊಂಡ ಪ್ರಶ್ನೆಪತ್ರಿಕೆಯನ್ನು ಹೊಲಕ್ಕೆ ತಂದು, ಕಾಪಿ ಚೀಟಿ ಸಿದ್ಧಪಡಿಸುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನು ವಿಜಯಪುರದಲ್ಲಿ ಒಟ್ಟು 98 ಕೇಂದ್ರಗಳಲ್ಲಿ ನಡೆಯುತ್ತಿದ್ದು, 31,801 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ
Comments