ಬ್ರಹ್ಮೋಸ್ ಸೂಪರ್ ಸಾನಿಕ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಭಾರತ
ರಾಜಸ್ಥಾನದ ಪೋಖರಣ್ ನಲ್ಲಿ ಕ್ಷಿಪಣಿ ಪರೀಕ್ಷೆ ನಡೆದಿದೆ. ಈ ಹಿಂದೆ 2017ರಲ್ಲಿ ವಾಯುಪಡೆಯ ಸುಖೋಯಿ ಯುದ್ಧ ವಿಮಾನದ ಮೂಲಕ ಕ್ರೂಯಿಸ್ ಮಿಸೈಲನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.
ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಹಾಗೂ ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು ಭಾರತದ ಬ್ರಹ್ಮಪುತ್ರಾ ಹಾಗೂ ರಷ್ಯಾದ ಮೋಸ್ಕ್ವಾ ನದಿಯ ಹೆಆರನ್ನು ಸೇರಿಸಿ ಕ್ಷಿಪಣಿಗೆ ನಾಮಕರಣ ಮಾಡಲಾಗಿತ್ತು. ಮಧ್ಯಮ ವ್ಯಾಪ್ತಿಯ ರಾಮ್ಜೆಟ್ ಸೂಪರ್ಸಾನಿಕ್ ಕ್ರೂಯಿಸ್ ಕ್ಷಿಪಣಿಯಾಗಿರುವ ಬ್ರಹ್ಮೋಸ್ ನ್ನು ಭೂಮಿ, ಆಕಾಶ ಹಾಗು ಸಮುದ್ರಗಳಲ್ಲಿ ಉಡಾವಣೆ ಮಾಡಬಹುದು. ಕಳೆದ ವರ್ಷ ದುಬೈ ನಲ್ಲಿ ಆಯ್ಯೋಜಿತವಾದ ಏರ್ ಶೋ ನಲ್ಲಿ ಈ ಕ್ಷಿಪಣಿಯನ್ನು ಪ್ರದರ್ಶ್ನಕ್ಕಿಡಲಾಗಿತ್ತು. ಆವೇಳೆ ಅನೇಕ ರಾಷ್ಟ್ರಗಳು ಇದರತ್ತ ಆಕರ್ಷಿತವಾಗಿದ್ದವು. ಬ್ರಹ್ಮೋಸ್ ನ್ನು 2006 ರಿಂದ ನೌಕಾಪಡೆ ಮತ್ತು ಸೈನ್ಯಕ್ಕೆ ಸೇರ್ಪಡೆ ಮಾಡಲಾಗಿದೆ.
Comments