ಈ ಕೂಡಲೇ ಫೇಸ್ ಬುಕ್ ನಲ್ಲಿ ಕೆಲವು ವಿಷಯಗಳನ್ನು ಡಿಲೀಟ್ ಮಾಡಿ

ಫೇಸ್ಬುಕ್ ನಲ್ಲಿ ಮಾಹಿತಿ ಸೋರಿಕೆಯಾಗ್ತಿರುವುದ್ರಿಂದ ಕೆಲವೊಂದು ಸಂಗತಿಗಳನ್ನು ತಕ್ಷಣ ಫೇಸ್ಬುಕ್ ನಿಂದ ಡಿಲೀಟ್ ಮಾಡುವುದು ಒಳ್ಳೆಯದು. ಫೇಸ್ಬುಕ್ ನಲ್ಲಿ ಫೋನ್ ನಂಬರ್ ಹಾಕಿದ್ದರೆ ತಕ್ಷಣ ತೆಗೆಯಿರಿ. ಇದು ದುರುಪಯೋಗವಾಗುವ ಸಾಧ್ಯತೆಯಿದೆ. ಅಷ್ಟು ಅವಶ್ಯಕತೆಯಿದ್ದರೆ ಮೆಸ್ಸೆಂಜರ್ ನಲ್ಲಿ ಸಂದೇಶ ರವಾನೆ ಮಾಡಿ.
ಆದ್ರೆ ಫೇಸ್ಬುಕ್ ನಲ್ಲಿ ನಿಮ್ಮ ನಂಬರ್ ಹಾಕಬೇಡಿ. ಜನ್ಮದಿನಾಂಕದ ಅವಶ್ಯಕತೆ ಕೂಡ ಇಲ್ಲ. ಈ ಜನ್ಮದಿನಾಂಕವನ್ನಿಟ್ಟುಕೊಂಡು ಹ್ಯಾಕರ್ಸ್ ಅನೇಕ ಮಾಹಿತಿಯನ್ನು ತೆಗೆಯುತ್ತಾರೆ. ಹಾಗಾಗಿ ಫೇಸ್ಬುಕ್ ನಲ್ಲಿ ಹುಟ್ಟಿದ ದಿನಾಂಕ ಹಾಕಿದ್ದರೆ ಈಗ್ಲೇ ತೆಗೆಯಿರಿ.ಲೊಕೇಷನ್ ಕಳುಹಿಸಬೇಡಿ. ಇದು ನೀವು ಮನೆಯಿಂದ ಹೊರಗಿದ್ದೀರಿ ಎಂಬುದನ್ನು ಎಲ್ಲರಿಗೂ ತಿಳಿಸುತ್ತದೆ. ವಿಮಾನ ನಿಲ್ದಾಣ ಅಥವಾ ಪ್ರವಾಸಕ್ಕೆ ಹೋದ ಫೋಟೋವನ್ನೂ ತಕ್ಷಣ ಫೇಸ್ಬುಕ್ ಗೆ ಹಾಕಬೇಡಿ.
ನೀವು ಮನೆಯಲ್ಲಿಲ್ಲ ಎಂಬುದು ತಿಳಿದ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕಳ್ಳತನವಾಗುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಬಾಸ್ ಎಂದೂ ಸ್ನೇಹಿತರ ಲೀಸ್ಟ್ ನಲ್ಲಿ ಬೇಡ. ನಿಮ್ಮ ವೈಯಕ್ತಿಕ ಫೋಟೋ ಹಾಗೂ ಅಭಿಪ್ರಾಯ ಬಾಸ್ ಮನಸ್ಸನ್ನು ಘಾಸಿಗೊಳಿಸಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಮಾಜಿ ಸ್ನೇಹಿತೆ ಅಥವಾ ಸ್ನೇಹಿತನ ಫೋಟೋವನ್ನು ಫೇಸ್ಬುಕ್ ನಲ್ಲಿಡಬೇಡಿ. ಇದು ಮುಂದೆ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
Comments