ಡೆಬಿಟ್ ಕಾರ್ಡ್ ಬಳಕೆದಾರರನ್ನು ಬೆಚ್ಚಿಬೀಳಿಸುವ ಸುದ್ದಿ...!!

ಕೇಂದ್ರ ಸರ್ಕಾರ ಡೆಬಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಪ್ರಯತ್ನಿಸ್ತಾ ಇದೆ. ಆದ್ರೆ ಬ್ಯಾಂಕ್ ಗಳು ಮಾತ್ರ ವಿನಾಕಾರಣ ಗ್ರಾಹಕರಿಂದ ಶುಲ್ಕ ವಸೂಲಿ ಮಾಡುವುದರಲ್ಲಿ ನಿರತವಾಗಿವೆ. ಕಾರ್ಡ್ ಸ್ವೈಪ್ ಮಾಡಿದಾಗ ಟ್ರಾನ್ಸಾಕ್ಷನ್ ಡಿಕ್ಲೈನ್ ಆದ್ರೆ ಅದಕ್ಕೂ ಶುಲ್ಕ ಪಡೆಯುತ್ತಿವೆ.
ಅದರ ಜೊತೆಗೆ ಗ್ರಾಹಕರು ಜಿಎಸ್ಟಿಯನ್ನೂ ಕಟ್ಟಬೇಕು. ಎಸ್ ಬಿ ಐ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದಾಗ ಟ್ರಾನ್ಸಾಕ್ಷನ್ ಡಿಕ್ಲೈನ್ ಆದ್ರೆ, ಪ್ರತಿ ವಹಿವಾಟಿಗೆ 17 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಎಚ್ ಡಿ ಎಫ್ ಸಿ ಬ್ಯಾಂಕ್ 25 ರೂಪಾಯಿ ಪಡೆಯುತ್ತದೆ. ಮಷಿನ್ ಸಮಸ್ಯೆಯಿಂದ ಅಥವಾ ಬ್ಯಾಲೆನ್ಸ್ ಇಲ್ಲದೇ ಇದ್ದಲ್ಲಿ, ಇನ್ಯಾವುದೋ ತಾಂತ್ರಿಕ ತೊಂದರೆಯಿಂದ ಟ್ರಾನ್ಸಾಕ್ಷನ್ ಡಿಕ್ಲೈನ್ ಆಗುತ್ತದೆ. ಅದಕ್ಕೂ ಶುಲ್ಕ ವಿಧಿಸುವುದು ಎಷ್ಟು ಸರಿ ಅನ್ನೋದು ಗ್ರಾಹಕರ ಪ್ರಶ್ನೆ.
Comments