ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ …!!

ವಿದ್ಯಾರ್ಥಿಗಳಿಗೆ ಗರಿಷ್ಠ 6 ಗ್ರೇಸ್ ಅಂಕಗಳು ಸಿಗಲಿವೆ. ಇಂಗ್ಲಿಷ್ ನಲ್ಲಿ ಕಡ್ಡಾಯ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಗೆ ಎರಡು ಗ್ರೇಸ್ ಅಂಕಗಳು ಸಿಗಲಿವೆ. ಭೌತಶಾಸ್ತ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದರೆ ಅವರಿಗೆ ಹೆಚ್ಚುವರಿ 5 ಅಂಕಗಳು ಸಿಗುತ್ತವೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.
ವ್ಯಾಕರಣ ಲೋಪದೋಷ, ಸ್ಪೆಲ್ಲಿಂಗ್ ನಲ್ಲಿ ತಪ್ಪು ಮತ್ತು ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣ ದೋಷದಿಂದಾಗಿ ಗ್ರೇಸ್ ಅಂಕಗಳನ್ನು ನೀಡಲು ತೀರ್ಮಾನಿಸಲಾಯಿತು. ಮೌಲ್ಯಮಾಪನದ ಒಪ್ಪಿಗೆ ಯೋಜನೆ ಪ್ರಕಾರವೇ ಎಲ್ಲಾ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ಮೌಲ್ಯಮಾಪಕರಿಗೆ ಸೂಚಿಸಲಾಗಿದ್ದು ಉತ್ತರ ಪತ್ರಿಕೆಗಳಲ್ಲಿ ಗ್ರೇಸ್ ಅಂಕಗಳನ್ನು ನಮೂದಿಸಲಾಗುತ್ತದೆ.
ಇಲ್ಲಿಯವರೆಗೆ ಗ್ರೇಸ್ ಅಂಕಗಳನ್ನು ಮೌಲ್ಯಮಾಪನ ಮಾಡುವಾಗ ಉಪನ್ಯಾಸಕರೇ ನೀಡುತ್ತಿದ್ದರು. ಪ್ರಸ್ತುತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿಂದ ಹೊರಗಿನ ಪ್ರಶ್ನೆಗಳನ್ನು ಕೇಳಿದರೆ ಮತ್ತು ಅಸ್ಪಷ್ಟ ಹಾಗೂ ಅಸಮಂಜಸ ಪ್ರಶ್ನೆಗಳನ್ನು ಕೇಳಿದರೆ ಗ್ರೇಸ್ ಅಂಕಗಳನ್ನು ನೀಡಲಾಗುತ್ತದೆ.
Comments