ಬಾಲಿವುಡ್ ನಟಿಗೆ ಕೊನೆಗೂ ನೆರವು ಸಿಕ್ಕಿದೆ...!!

22 Mar 2018 12:55 PM | General
637 Report

ವೀರ್ ಗತಿ ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿದ್ದ ಪೂಜಾ ದದ್ವಾಲ್ ಗೆ ಕೊನೆಗೂ ನೆರವು ಸಿಕ್ಕಿದೆ. ಭೋಜ್ಪುರಿ ನಟ ರವಿ ಕಿಶನ್, ಟಿಬಿಯಿಂದ ಬಳಲುತ್ತಿರುವ ಪೂಜಾಗೆ ಸಹಾಯ ಹಸ್ತ ನೀಡಿದ್ದಾರೆ. ಎಂಎಲ್‌ಎ ಇನ್ ಹೈದ್ರಾಬಾದ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರವಿ ಕಿಶನ್, ತಮ್ಮ ಸಹಾಯಕರ ಮೂಲಕ ಪೂಜಾ ದದ್ವಾಲ್ ಗೆ ಹಣ್ಣು ಹಾಗೂ ಹಣವನ್ನು ಕಳಿಸಿಕೊಟ್ಟಿದ್ದಾರೆ.

ರವಿ ಕಿಶನ್ ಕೂಡ ಪೂಜಾ ಜೊತೆಗೆ ಅಭಿನಯಿಸಿದ್ದರು. 6 ತಿಂಗಳ ಹಿಂದೆ ಟಿಬಿ ಖಾಯಿಲೆಯಿಂದ ಬಳಲುತ್ತಿರುವ ವಿಚಾರ ಪೂಜಾಗೆ ಗೊತ್ತಾಗಿತ್ತು. ಬಳಿಕ ಆಕೆಯ ಪತಿ ಹಾಗೂ ಕುಟುಂಬಸ್ಥರು ಪೂಜಾಳನ್ನು ದೂರ ಮಾಡಿದ್ದಾರೆ. ಗೋವಾದ ಕ್ಯಾಸಿನೋ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಪೂಜಾ ಬಳಿ ನಯಾಪೈಸೆ ಇರಲಿಲ್ಲ. 15 ದಿನಗಳಿಂದ ಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದ ಪೂಜಾ, ನಟ ಸಲ್ಮಾನ್ ಖಾನ್ ರಿಂದ ಸಹಾಯ ಕೇಳಿದ್ದಳು. ಹಲವು ಬಾರಿ ಸಲ್ಮಾನ್ ರನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ ಅಂತಾ ಹೇಳಿದ್ದಳು. ಇದೀಗ ಭೋಜ್ಪುರಿ ನಟ ಆಕೆಗೆ ನೆರವಿನ ಹಸ್ತ ನೀಡಿದ್ದಾರೆ.

 

Edited By

Shruthi G

Reported By

Madhu shree

Comments