7 ಸೆಕೆಂಡ್ ನಲ್ಲಿ ಡೌನ್ಲೋಡ್ ಆಗಲಿದೆ ಹೆಚ್ ಡಿ ಸಿನಿಮಾ
ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ.
ಜಿಯೋ JioFi JMR815 ಸಾಧನಕ್ಕೆ ಒಂದು ವರ್ಷ ವಾರಂಟಿ ನೀಡ್ತಿದೆ. ಬಳಕೆದಾರರು 150Mbps ಹೈಸ್ಪೀಡ್ ಡೌನ್ಲೋಡ್ ಹಾಗೂ 50ಎಂಬಿಪಿಎಸ್ ವರೆಗೆ ಅಪ್ಲೋಡ್ ಸ್ಪೀಡ್ ಆನಂದಿಸಬಹುದೆಂದು ಜಿಯೋ ಹೇಳಿದೆ. ಅಂದ್ರೆ 1ಜಿಬಿಯ ಒಂದು ಸಿನಿಮಾ ಕೇವಲ 7 ಸೆಕೆಂಡ್ ನಲ್ಲಿ ಡೌನ್ಲೋಡ್ ಆಗಲಿದೆ. ಒಂದೇ ಬಾರಿ 32 ಬಳಕೆದಾರರು ಇದನ್ನು ಬಳಸಬಹುದಾಗಿದೆ. 31 ಬಳಕೆದಾರರು ವೈಫೈ ಜೊತೆ ಹಾಗೂ ಇನ್ನೊಬ್ಬ ಯುಎಸ್ ಬಿ ಜೊತೆ ನೆಟ್ ಸಂಪರ್ಕ ಹೊಂದಬಹುದಾಗಿದೆ. ಕನೆಕ್ಟ್ ಆದ ನಂತ್ರ 4ಜಿ ವೈಸ್ ಆಯಪ್ ಮೂಲಕ ಹೆಚ್ಡಿ ವೈಸ್ ಹಾಗೂ ವಿಡಿಯೋ ಕಾಲ್ ಮಾಡುವ ಅವಕಾಶ ಸಿಗಲಿದೆ.
Comments