ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರಿಗೆ ಗೂಗಲ್ ಡೂಡಲ್ ಗೌರವ

ಪಂಡಿತ್ ಉಸ್ತಾದ್ ಬಿಸ್ಮಿಲ್ಲಾ ಖಾನ್ 1916ರಲ್ಲಿ ಬಿಹಾರದ ಬುಕ್ಸರ್ ಜಿಲ್ಲೆಯ ಡುಮರಾನ್ ನಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ನಂತರ 6 ವರ್ಷದವರಾಗಿದ್ದಾಗ ವಾರಣಾಸಿಗೆ ವಲಸೆ ಹೋದರು. ಅಲ್ಲಿಂದ ಅವರು ಶಹನಾಯಿಯಲ್ಲಿ ಔಪಚಾರಿಕ ಶಿಕ್ಷಣ ಪಡೆದರು.
ಅವರ ಶಹನಾಯ್ ನುಡಿಸುವಿಕೆ ಎಷ್ಟು ಅದ್ಭುತ ಮತ್ತು ಸುಮಧುರವಾಗಿತ್ತೆಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಮತ್ತು ಮೊದಲ ಗಣರಾಜ್ಯೋತ್ಸವದ ದಿನ ಶಹನಾಯಿ ನುಡಿಸಲು ಬಿಸ್ಮಿಲ್ಲಾ ಖಾನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಅವರು ದೆಹಲಿಯ ಕೆಂಪು ಕೋಟೆಯಲ್ಲಿ ಶಹನಾಯಿ ನುಡಿಸಿದ್ದರು. ಆ ಬಳಿಕ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ದಿನ ಅವರು ಶಹನಾಯಿ ನುಡಿಸುತ್ತಿದ್ದು ಪ್ರಧಾನಿಯವರ ಭಾಷಣದ ನಂತರ ಅದು ಪ್ರಸಾರವಾಗುತ್ತಿತ್ತು. ಪಂಡಿತ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮ ಶ್ರೀ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 2006ರ ಆಗಸ್ಟ್ 21ರಂದು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು.
Comments