ಈ ಬಾಲಿವುಡ್ ಕ್ವೀನ್ ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಂತೆ..!
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತನ್ನ ರೋಲ್ ಮಾಡೆಲ್ ಎಂದಿದ್ದರು. ನಾನು ಪತ್ರಿಕೆಯನ್ನು ತುಂಬಾ ಓದೋದಿಲ್ಲ. ಆದ್ರೆ ಮೋದಿಯ ದೊಡ್ಡ ಅಭಿಮಾನಿ. ಅವರದ್ದು ಯಶಸ್ವಿ ಕಥೆ. ಟೀ ಮಾರುವವರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ. ಇದು ಅವರದ್ದಲ್ಲ, ದೇಶದ ಪ್ರಜಾಪ್ರಭುತ್ವದ ಜಯ ಎಂದು ಕಂಗನಾ ಹೇಳಿದ್ದರು.
ಈಗ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಕಂಗನಾ, ಪಿಎಂ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಕಂಗನಾ ಸೀರೆಯುಟ್ಟಿದ್ದರು. ಮೋದಿ ಜೊತೆ ಕಂಗನಾ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments