ಇಡೀ ರಾಜ್ಯದ ಮನೆ ಮಾತಾ ಆಗಿರುವ ಶನಿಯ ಕಥೆ…!! ಇಲ್ಲಿದೆ ನೋಡಿ
ತನ್ನ ಅಧ್ಬುತ ನಟನೆಯ ಮೂಲಕ ಎಲ್ಲರ ಮನ ಗೆದ್ದಿರುವ ಶನಿ ಪಾತ್ರದಾರಿ ಆ ಬಾಲಕನ ಬಗ್ಗೆ ನಿಜ ಜೀವನದ ಮನದಾಳದ ಮಾತು ಚಾಮರಾಜನಗರ ದೀನಬಂಧು ಆಶ್ರಮ. ಜಿ.ಎಸ್. ಶಿವರುದ್ರಪ್ಪ ಅವರ ಮಗ ಜೈದೇವ್ ಈ ಆಶ್ರಮ ನಡೆಸುತ್ತಾರೆ. ಅಲ್ಲಿ ಬೆಳೆದ ಬಾಲಕ ಈಗ ಇಡೀ ರಾಜ್ಯದ ಮನೆಮಾತು. ಅವನ ಹೆಸರು ಸುನೀಲ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಶನಿ' ಧಾರಾವಾಹಿಯ ಶನಿ ಪಾತ್ರಧಾರಿ.
ಅದು ಆರೇಳು ವಾಕ್ಯದ ಸುದೀರ್ಘ ಸಂಭಾಷಣೆ. ಸುನೀಲ್ಗೆ ಕಥೆ ಬಗ್ಗೆಯಾಗಲೀ, ಪಾತ್ರದ ಬಗ್ಗೆಯಾಗಲೀ ಹೆಚ್ಚೇನೂ ಹೇಳಲಿಲ್ಲ. ಬರೀ ಸನ್ನಿವೇಶವನ್ನು ವಿವರಿಸಿದ್ದಷ್ಟೇ. ಈ ಹುಡುಗನಿಗೆ ಸೀರಿಯಲ್, ಅದಕ್ಕೆ ನಡೆಸುವ ಆಡಿಷನ್ ಬಗೆಗೆ ಏನೊಂದೂ ಗೊತ್ತಿಲ್ಲ. ಟಿವಿ ನೋಡ್ತಿದ್ದದ್ದು ಎಕ್ಸಾಂ ಇಲ್ಲದ ಭಾನುವಾರದಲ್ಲಿ ಮಾತ್ರ. ಉಳಿದಂತೆ ಓದು, ಕಲೆಯ ಬಗ್ಗೆಯೇ ಕಲಿಕೆ. ಆದರೆ, ನಟನೆ ಒಂಚೂರು ಗೊತ್ತಿತ್ತು. 'ಆಯಕ್ಷನ್' ಅಂದಿದ್ದೇ, ಏಳು ವಾಕ್ಯಗಳ ಆ ಸುದೀರ್ಘ ಸಂಭಾಷಣೆಯನ್ನು ಪಟಪಟನೆ ಹೇಳಿದ. ಮೊದಲ ಟೇಕ್ ಓಕೆ ಆಯ್ತು. ಆಶ್ರಮದಲ್ಲಿ ಬೆಳೆದು ಕಿರುತೆರೆಯ ಸೂಪರ್ಸ್ಟಾರ್ ಆದ ಶನಿ ಅಲ್ಲಿಯವರೆಗೆ ಆಡಿಷನ್ ಮಾಡಿದ ಹುಡುಗರಿಗಿಂತ ಭಿನ್ನವಾಗಿದ್ದ, ನಟನೆಯಲ್ಲಿ ಹೊಸತನ ಇತ್ತು. ಆಡಿಷನ್ಗೆ ಬಂದವರಿಗೆ ಈ ಹುಡುಗನೇ ಶನಿ ಪಾತ್ರಧಾರಿ ಅನಿಸಿಬಿಟ್ಟಿತು. ತನ್ನಷ್ಟಕ್ಕೇ ತಾನೇ ಕಲಿತುಕೊಳ್ಳುತ್ತ ಬೆಳೆಯುತ್ತಿದ್ದಾನೆ ಸುನೀಲ್. 'ಮೊದಲ ಸಲ ಡೈಲಾಗ್ ಒಪ್ಪಿಸುವಾಗ ಏನೂ ಅನಿಸಿಲ್ಲ.
ನನಗಾಗ ಶನಿ ಅಂತ ಒಬ್ಬ ದೇವರಿದ್ದಾನೆ ಅನ್ನೋದೂ ಗೊತ್ತಿರಲಿಲ್ಲ. ಈಗಲೂ ಶನಿ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಕತೆ ಸ್ವಲ್ಪ ಗೊತ್ತಾಗಿದೆ. ಶೂಟಿಂಗ್ನಲ್ಲಿ ಆ ಸೀನ್ ಏನು ಅಂತ ವಿವರಿಸ್ತಾರೆ ಅಷ್ಟೇ' ಎಂದು ಮುಗ್ಧವಾಗಿ ಹೇಳುತ್ತಾನೆ. ಗೆಳೆಯರ ಜೊತೆಗೆ ಜಾಲಿಯಾಗಿದ್ದುಕೊಂಡು, ಆ ವಯಸ್ಸಿನ ಹುಡುಗರಂತೆ ಚಟುವಟಿಕಯಿಂದಿರುವ ಸುನೀಲ್ 'ಶನಿ' ಕಾಸ್ಟ್ಯೂಮ್ ಹಾಕಿದ ಕೂಡಲೇ ಬದಲಾಗ್ತಾನೆ. ಈ ಚೇಂಜ್ ಅನ್ನು ಸ್ವತಃ ಈ ಧಾರಾವಾಹಿಯ ಕಾಸ್ಟಿಂಗ್ ಡೈರೆಕ್ಟರ್ ದೀಪಕ್ ಅವರೂ ಗಮನಿಸಿದ್ದಾರೆ. ಅಲ್ಲಿಯವರೆಗೆ ತಮಾಷೆಯಾಗಿದ್ದ ಹುಡುಗ ಏಕ್ದಂ ಸೀರಿಯಸ್ ಆಗಿಬಿಡು ತ್ತಾನೆ. ಮುಖದಲ್ಲಿ ಸೂಕ್ಷ್ಮ ವ್ಯತ್ಯಾಸ ಕಾಣುತ್ತೆ. ಈ ಸೀರಿಯಲ್ ಸೆಟ್ ಇರುವುದು ಮಹಾರಾಷ್ಟ್ರದ ಗುರ್ಗಾಂವ್ನಲ್ಲಿ. ಈ ಹುಡುಗನೂ ಸೇರಿದಂತೆ ಮುಖ್ಯಪಾತ್ರಧಾರಿಗಳಿಗೆ ಅಲ್ಲಿಯೇ ವಾಸ್ತವ್ಯ ಕಲ್ಪಿಸಲಾಗಿದೆ. ಎಲ್ಲ ಸೌಲಭ್ಯವನ್ನೂ ನೀಡಲಾಗಿದೆ. ತಿಂಗಳಲ್ಲಿ ಒಮ್ಮೆ ಐದು ದಿನಗಳ ರಜೆ ಸಿಗುತ್ತದೆ. ಆಗ ಸುನೀಲ್ ಚಾಮರಾಜನಗರದ ತನ್ನ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಹಾಗೂ ಯಕ್ಷಗಾನ ಕಲಿಯುವ ಮಣಿಪಾಲದಲ್ಲಿ ಆತನ ಅಭಿನಯವನ್ನು ಮೆಚ್ಚುವ ಜೊತೆಗೆ ಯಾವ ರೀತಿ ಇಂಪ್ರೂವ್ ಆಗ್ಬೇಕು ಅನ್ನೋದನ್ನೂ ಹೇಳ್ತಾರೆ
Comments