ಪತಿ ವಿರುದ್ಧ ಕಿರುಕುಳದ ದೂರು ದಾಖಲಿಸಿದ ನಟಿ ಚೈತ್ರ

ಖುಷಿ ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾದ ನಟಿ ಚೈತ್ರ ತಮ್ಮ ನಟನೆಯ ಮೂಲಕ ಎಲ್ಲರ ಮನ ಸೆಳೆದಿದ್ದರು. ದಾಂಪತ್ಯಕ್ಕೆ ಕಾಲಿಟ್ಟ ಈ ನಟಿ ಇದೀಗ ಅವರು ಪತಿಯ ವಿರುದ್ಧ ಕಿರುಕುಳದ ದೂರು ದಾಖಲಿಸಿರುವುದು ಬೇಸರದ ಸಂಗತಿಯಾಗಿದೆ.
ಹೌದು ಬಸವನಗುಡಿ ಮಹಿಲಾ ಠಾಣೆಗೆ ನೀಡಿರುವ ದೂರಿನಲ್ಲಿ ನನ್ನ ಪತಿ ಬಾಲಾಜಿ ಪೋತ್ರಾಜ್ ಯುವತಿಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ವಿಚಾರ ಪ್ರಶ್ನಿಸಿದ್ದಕ್ಕೆ ನನಗೆ ಥಳಿಸಿದ್ದಾರೆ. ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಚೈತ್ರಾ ಅವರು ಬಾಲಾಜಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರೂ ಜಂಟಿಯಾಗಿ ಧಾರಾವಾಹಿಯೊಂದನ್ನೂ ನಿರ್ಮಿಸಿದ್ದು ಅಲ್ಲಿ ಬಂದ ಹಣದಲ್ಲೂ ನನಗೆ ವಂಚನೆ ಆಗಿದೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ.
Comments