ಪತಿಯ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಶಶಿಕಲಾ

ಚೆನ್ನೈ ಆಸ್ಪತ್ರೆಯಲ್ಲಿ ಪತಿ ನಟರಾಜನ್ ಮಾರುತಪ್ಪ(74) ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಕಲಾ ಪತಿ ನಿಧನ ಸುದ್ದಿಗೆ ಕೇಳಿ ಒಮ್ಮೆ ಬೆಚ್ಚಿಬಿದ್ದ ಶಶಿಕಲಾ. ಅನಾರೋಗ್ಯದ ಕಾರಣ ನಟರಾಜನ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿತ್ತು.
ಆದರೆ, ಅವರು ಅರ್ಜಿ ಸಲ್ಲಿಸಿರಲಿಲ್ಲ. ತಡರಾತ್ರಿ ನಟರಾಜನ್ ನಿಧನರಾಗಿರುವ ಸುದ್ದಿ ತಿಳಿದ ಶಶಿಕಲಾ ಕುಸಿದು ಬಿದ್ದಿದ್ದಾರೆ. ಬೆಳಿಗ್ಗೆ 8.30 ರ ಬಳಿಕ ಅವರು ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದು, ಮಾಹಿತಿ ದೃಢಪಡಿಸಿಕೊಂಡು ಅವರನ್ನು ಜೈಲಿನ ಸಿಬ್ಬಂದಿ ಕಳುಹಿಸಿಕೊಡಲಿದ್ದಾರೆ. ತುರ್ತು ಪೆರೋಲ್ ಪ್ರಕ್ರಿಯೆ ಪೂರ್ಣಗೊಳಿಸಿ ಶಶಿಕಲಾ 11 ಗಂಟೆ ಸುಮಾರಿಗೆ ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಚೆನ್ನೈನ ನಿವಾಸಕ್ಕೆ ನಟರಾಜನ್ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Comments