ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ಗಳು...!!

19 Mar 2018 1:14 PM | General
602 Report

ಈಗಾಗಲೇ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್ಸಂಗ್ ಟಾಪ್ ಎಂಡ್ ಪೋನ್ಗಳಾದ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಗಳನ್ನು ಕೊಳ್ಳುವವರಿಗೆ ರಿಲಯನ್ಸ್ ಜಿಯೋ ಆಫರ್ ವೊಂದನ್ನು ನೀಡದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಸಾಧ್ಯತೆ ಇದ್ದು, ಇತರೆ ಯಾವುದೇ ಕಂಪನಿಗಳು ಇಟ್ಟು ದೊಡ್ಡ ಮಟ್ಟದ ಡೇಟಾ ಆಫರ್ ಅನ್ನು ಮಾರುಕಟ್ಟೆಯಲ್ಲಿ ಘೋಷಣೆ ಮಾಡಿಲ್ಲ ಎನ್ನಲಾಗಿದೆ.

ಸ್ಯಾಮ್ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಗಳನ್ನು ಕೊಳ್ಳುವವರಿಗೆ ರಿಲಯನ್ಸ್ ಜಿಯೋ ಒಂದು ವರ್ಷದ ಅವಧಿಗೆ ಬಳಕೆ ಮಾಡಿಕೊಳ್ಳಲು 1 TB ಡೇಟಾವನ್ನು ನೀಡಲಿದೆ. ಇದಲ್ಲದೇ ಉಚಿತವಾಗಿ ಮಿತಿ ಇಲ್ಲದ ಕರೆ ಮಾಡುವ ಸೇವೆಯನ್ನು ಹಾಗೂ ಉಚಿತವಾಗಿ SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ರಿಯಲನ್ಸ್ ಜಿಯೋ ಸ್ಯಾಮ್ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಗಳನ್ನು ಕೊಳ್ಳುವವರಿಗೆ ನೀಡುತ್ತಿರುವ ಆಫರ್ ಮೌಲ್ಯವೂ ರೂ.15,000 ಗಳಾಗಲಿದ್ದು, ಇದನ್ನು ಕೇವಲ ರೂ.4999ಕ್ಕೆ ನೀಡುತ್ತಿದ್ದು, ಇದಲ್ಲದೇ ಇನ್ನು ಅನೇಕ ಆಫರ್ ಗಳನ್ನು ಇದರೊಂದಿಗೆ ಜಿಯೋ ತ್ವರೆ ಮಾಡಲಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ನಲ್ಲಿ ಸ್ಯಾಮ್ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಗಳನ್ನು ಖರೀದಿಸಿದರೆ ರೂ.6000 ಕ್ಯಾಷ್ ಬ್ಯಾಕ್ ನೀಡುವ ಆಫರ್ ಅನ್ನು ರಿಲಯನ್ಸ್ ನೀಡಿದೆ.

ಇದರಿಂದ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಇದಲ್ಲದೇ ಸ್ಯಾಮ್ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಗಳನ್ನು ಜಿಯೋ ನೊಂದಿಗೆ ಖರೀದಿಸಿದರೆ ಶೇ.70%ರಷ್ಟು ಬೈ ಬ್ಯಾಕ್ ಆಫರ್ ಅನ್ನು ಸಹ ನೀಡಲಾಗಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ದೊಡ್ಡ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ. ಸ್ಯಾಮ್ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ಫೋನ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ಯಾಲೆಕ್ಸಿ S9 64GB ಆವೃತ್ತಿಯೂ ರೂ. 57,900ಕ್ಕೆ ಹಾಗೂ 256GB ಆವೃತ್ತಿ ರೂ.64,900ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ 64GB ಆವೃತ್ತಿಯೂ ರೂ.65,900ಕ್ಕೆ ಹಾಗೂ 256GB ಆವೃತ್ತಿಯೂ ರೂ.72,900ಕ್ಕೆ ದೊರೆಯುತ್ತಿದೆ.

Edited By

Shruthi G

Reported By

Madhu shree

Comments