ಬ್ಯಾಂಕ್ ನಲ್ಲಿ ಕೆಲಸವಿದ್ದರೆ ಇಂದೇ ತಿಂಗಳು ಮುಗಿಸಿಕೊಳ್ಳಿ...!!

ಜನರು ತೆರಿಗೆ ಯೋಜನೆ, ಹೂಡಿಕೆ ಬಗ್ಗೆ ಪ್ಲಾನ್ ಮಾಡ್ತಾರೆ. ಆದ್ರೆ ಮಾರ್ಚ್ ತಿಂಗಳಿನಲ್ಲಿ ನಿರಂತರ ರಜಾ ಬಂದ್ರೆ ಸಮಸ್ಯೆಯಾಗುತ್ತದೆ. ಈ ಬಾರಿ ಮಾರ್ಚ್ ತಿಂಗಳಿನಲ್ಲಿ ನಿರಂತರ ರಜೆ ಬಂದಿದೆ. ಹಾಗಾಗಿ ಕೆಲಸವನ್ನು ಮಾರ್ಚ್ ಕೊನೆಗೆ ಇಟ್ಟುಕೊಳ್ಳುವ ಬದಲು ಈಗ್ಲೇ ಮಾಡಿ ಮುಗಿಸಿ.
ಯಾಕೆಂದ್ರೆ ಮಾರ್ಚ್ 29 ಗುರುವಾರ ಮಹಾವೀರ ಜಯಂತಿ. ಸರ್ಕಾರಿ ಕಚೇರಿ ಸೇರಿದಂತೆ ಎಲ್ಲ ಬ್ಯಾಂಕ್ ಗಳೂ ಬಂದ್ ಆಗಲಿವೆ. ಮಾರ್ಚ್ 30 ಶುಕ್ರವಾರ ಗುಡ್ ಫ್ರೈಡೆ. ಸರ್ಕಾರದ ಎಲ್ಲ ಕಚೇರಿಗಳಿಗೂ ರಜೆ. ಮಾರ್ಚ್ 31 ಶನಿವಾರ ಹಾಗೆ ಬ್ಯಾಂಕ್ ಗಳ ಕ್ಲೋಸಿಂಗ್ ಡೇ. ಅಂದ್ರೆ ಗ್ರಾಹಕರ ಯಾವುದೇ ವಹಿವಾಟನ್ನು ಬ್ಯಾಂಕ್ ಅಂದು ಮಾಡೋದಿಲ್ಲ. ಏಪ್ರಿಲ್ 1 ಭಾನುವಾರ ರಜೆ. ಅಂದ್ರೆ ಸತತ ನಾಲ್ಕು ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಬ್ಯಾಂಕ್ ಬಾಗಿಲು ಮುಚ್ಚುವ ಜೊತೆ ಎಟಿಎಂನಲ್ಲಿ ಕೂಡ ಹಣ ಸಿಗೋದು ಅನುಮಾನ.
Comments