ಯುಗಾದಿ ಪ್ರಯುಕ್ತ ವರ್ಣ ರಂಜಿತ ಬೃಹತ್ ರಂಗೋಲಿ ಸೃಷ್ಟಿಸಿದ ಕಲಾವಿದರು  

17 Mar 2018 3:56 PM | General
489 Report

ಯುಗಾದಿ ಹಬ್ಬವೆಂದರೆ ಸಾಕು ಮನೆಯ ಮುಂದೆ ಹಸಿರು ತೋರಣ, ಬೇವು ಬೆಲ್ಲ ಹಂಚುವುದು ಮತ್ತೊಂದೆಡೆ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಇವೆಲ್ಲವೂ ಸಡಗರ ಸಂಭ್ರಮದಿಂದ ಕೂಡಿರುತ್ತದೆ. ಯುಗಾದಿಯ ಪ್ರಯುಕ್ತ ಮಹಾರಾಷ್ಟ್ರದ ಥಾಣೆಯಲ್ಲಿ 70 ಕಲಾವಿದರು 900 ಕೆಜಿ ವಿವಿಧ ಬಣ್ಣಬಣ್ಣದ ರಂಗೋಲಿ ಪುಡಿ ಬಳಸಿ 18,000 ಚದರ ಅಡಿ ಬೃಹತ್ ರಂಗೋಲಿ ಸೃಷ್ಟಿಸಿ ಗಮನಸೆಳೆದಿದ್ದಾರೆ.

ಈ ರಂಗವಲ್ಲಿ ಚಿತ್ತಾರ ಮೂಡಿಸಲು ಕಲಾವಿದರು ತೆಗೆದುಕೊಂಡ ಸಮಯ 9 ಗಂಟೆಗಳು. ಮಹಾರಾಷ್ಟ್ರದಲ್ಲಿ ಚೈತ್ರ ಮಾಸದ ಮೊದಲ ದಿನ ಗುಡಿ ಪಡ್ವಾ(ಯುಗಾದಿ). ನವ ಸಂವತ್ಸರವನ್ನು ಈ ಬಾರಿ ಪುಣೆಯಲ್ಲಿ ವಿಶೇಷವಾಗಿ ಸ್ವಾಗತಿಸಲಾಯಿತು. ಥಾಣೆಯ ಗಾಂವೋದೇವಿ ಮೈದಾನದಲ್ಲಿ ಇದಕ್ಕಾಗಿ ಬೃಹತ್ ರಂಗೋಲಿಯ ರಂಗುರಂಗಿನ ಚಿತ್ತಾರ ಬಿಡಿಸಲಾಯಿತು. ಇದಕ್ಕಾಗಿ ಸಜ್ಜುಗೊಳಿಸಿದ ವೇದಿಕೆಯಲ್ಲಿ 70 ಕಲಾವಿದರು 900 ಕೆಜಿ ವಿವಿಧ ಬಣ್ಣದ ರಂಗೋಲಿ ಪುಡಿ ಬಳಸಿ ಕೇವಲ 9 ಗಂಟೆಗಳಲ್ಲಿ 18,000 ಚ.ಅ. ರಂಗವಲ್ಲಿ ಹಾಕಿದರು. ಈ ರಂಗೋಲಿ ಕಲಾಕೃತಿ ಜನಮನವನ್ನು ವಿಶೇಷವಾಗಿ ಆಕರ್ಷಿಸಿತು. ಈ ಬೃಹತ್ ರಂಗೋಲಿ ದಾಖಲೆ ಪಟ್ಟಿಗೆ ಸೇರಲಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.

Edited By

Shruthi G

Reported By

Madhu shree

Comments