ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್...!!

ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸ್ತಿದೆ. ಜಿಯೋ ಒಂದೊಂದೇ ಆಫರ್ ಶುರು ಮಾಡ್ತಿದ್ದಂತೆ ಇತರ ಕಂಪನಿಗಳು ಅದನ್ನು ಫಾಲೋ ಮಾಡ್ತಿವೆ. ಮೊದಲು ಜಿಯೋ ಪ್ರತಿ ದಿನ 1ಜಿಬಿ ಡೇಟಾ ನೀಡಲು ಶುರು ಮಾಡಿತ್ತು. ನಂತ್ರ 1.5ಜಿಬಿ ಡೇಟಾ ನೀಡಲು ಶುರು ಮಾಡ್ತು. ಈಗ ಹೊಸ ಆಫರ್ ಹೊತ್ತು ತಂದಿದೆ.
ರಿಲಾಯನ್ಸ್ ಜಿಯೋ ಈಗ ವಿಶೇಷ ಯೋಜನೆಯೊಂದಿಗೆ ಬಂದಿದೆ. ಈ ಆಫರ್ ನಲ್ಲಿ ಪ್ರತಿದಿನ ಗ್ರಾಹಕರಿಗೆ 5 ಜಿಬಿ ಡೇಟಾ ಸಿಗಲಿದೆ. ಈ ಆಫರ್ ಬಹಳ ವಿಶೇಷವಾಗಿದೆ. ಈ ಯೋಜನೆಗಾಗಿ ಗ್ರಾಹಕರು 799 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳಾಗಿದೆ. ಕಂಪನಿ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, 28 ದಿನಗಳಲ್ಲಿ ಗ್ರಾಹಕರಿಗೆ 140 ಜಿಬಿ 4ಜಿ ಡೇಟಾ ಸಿಗಲಿದೆ. ಈ ಪ್ಯಾಕ್ ವಿದ್ಯಾರ್ಥಿಗಳಿಗೆ ಹಾಗೂ ಹೆಚ್ಚು ಡೇಟಾ ಬಳಸುವವರಿಗೆ ಉಪಯುಕ್ತವಾಗಲಿದೆ.
Comments