ಯುಗಾದಿ ಹಬ್ಬಕೆ ನಡೀತಿದೆ ಭರ್ಜರಿ ಸೇಲ್...!!

16 Mar 2018 4:49 PM | General
809 Report

ಭಾನುವಾರದ ಹಬ್ಬಕ್ಕೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಮನೆಗಳನ್ನು ಸ್ವಚ್ಛಗೊಳಿಸಿ ಹಬ್ಬಕ್ಕೆ ಹೆಂಗಳೆಯರು ಸಿದ್ಧರಾಗ್ತಿದ್ದಾರೆ. ಮಾರುಕಟ್ಟೆ ಕೂಡ ತುಂಬಿ ತುಳುಕುತ್ತಿದೆ. ಹೂ, ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಯುಗಾದಿ ಅವಶ್ಯವಾಗಿ ಬೇಕಾಗುವ ಮಾವು, ಬೇವು, ಬೆಲ್ಲ, ಕಬ್ಬು, ಬಣ್ಣ ಬಣ್ಣದ ರಂಗೋಲಿ ಎಲ್ಲವೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್, ಯಶವಂತಪುರ, ಜಯನಗರ ನೋಡಲು ಎರಡು ಕಣ್ಣು ಸಾಲೋದಿಲ್ಲ. ರಸ್ತೆ ಬದಿಯಲ್ಲಿಯೇ ಹಬ್ಬಕ್ಕೆ ಬೇಕಾಗುವ ವಸ್ತುಗಳು ಒಂದು ಕಡೆ ಸಿಗ್ತಿದ್ದರೆ ಮತ್ತೊಂದು ಕಡೆ ಜಾತ್ರೆಯಂತೆ ಜನ ಖರೀದಿಗೆ ಮುಂದಾಗ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಸಂಪ್ರದಾಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಅನೇಕ ಕಂಪನಿಗಳು ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಹಬ್ಬದ ಕೊಡುಗೆಯಾಗಿ ನೀಡ್ತಿವೆ. ಯುಗಾದಿ ಹಬ್ಬಕ್ಕೆ ಬಿಗ್ ಬಜಾರ್, ರಿಲಾಯನ್ಸ್ ಸೇರಿದಂತೆ ಅನೇಕ ಬಜಾರ್ ಗಳಲ್ಲಿ ಭರ್ಜರಿ ಸೇಲ್ ನಡೆಯುತ್ತಿದೆ.

 

 

Edited By

Shruthi G

Reported By

Madhu shree

Comments