ಸ್ಮಾರ್ಟ್ಫೋನ್-ಕಂಪ್ಯೂಟರ್ ಗಳನ್ನು ಹ್ಯಾಕರ್ಸ್ ನಿಂದ ಸೆಕ್ಯೂರ್ ಮಾಡುವುದು ಹೇಗೆ..?

ಸ್ಮಾರ್ಟ್ಫೋನ್ ಸೇರಿದಂತೆ ಕಂಪ್ಯೂಟರ್ ಹ್ಯಾಕಿಂಗ್ ದಿನದಿಂದ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಬಳಕೆಯ ವಿಧಾನ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಡಿವೈಸ್ಗಳನ್ನು ಹ್ಯಾಕರ್ಸ್ಗಳಿಂದ ರಕ್ಷಿಸಿಕೊಳ್ಳಲು ಮತ್ತು ಪಾಸ್ವರ್ಡ್ಗಳನ್ನು ಕದಿಯದಂತೆ ಮಾಡಲು ಹಲವು ಸುರಕ್ಷಿತ ವಿಧಾನಗಳಿಗೆ. ಈ ಹಿನ್ನಲೆಯಲ್ಲಿ ಅವುಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
ನೀವು ಮಾಡುವ ಒಂದು ತಪ್ಪಿನಿಂದಾಗಿ ನೀವು ಹ್ಯಾಕರ್ಸ್ಗಳ ದಾಳಿಗೆ ತುತ್ತಾಗುವಿರಿ. ಈ ಹಿನ್ನಲೆಯಲ್ಲಿ ನೀವು ಅಭ್ಯಾಸಿಸ ಬೇಕಾದ ಆರೋಗ್ಯ ಕರ ಹವ್ಯಾಸವನ್ನು ಬೆಳಸಿಕೊಳ್ಳಬೇಕಾಗಿದೆ. ಅಲ್ಲದೇ ಡಿವೈಸ್ಗಳನ್ನು ಸೇಫ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಈ ಅಭ್ಯಾಸಗಳು ನಿಮ್ಮನ್ನು ಸುರಕ್ಷಿತವಾಗಿಸಲಿದೆ.
ನಿಮ್ಮ ಡಿವೈಸ್ಗಳಲ್ಲಿ ವೈ-ಫೈ ಕನೆಕ್ಷನ್ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ದೊರೆಯುವ ವೈ-ಫೈಗಳಲ್ಲಿ ಯಾವುದೇ ಸೆಕ್ಯೂರಿಟಿ ಇಲ್ಲದೇ ಮುಕ್ತವಾಗಿರುವುದನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಇದು ಹ್ಯಾಕ್ ಮಾಡಲು ಇರುವ ತಂತ್ರವಾಗಿದೆ. ನಿಮ್ಮ ವೈ-ಫೈ ಅನ್ನು ಸಹ ಸೆಕ್ಯೂರ್ ಮಾಡಿರಿ. ಇದಲ್ಲದೇ ನೀವು ಬಳಕೆ ಮಾಡಿಕೊಳ್ಳುವ ಇಂಟರ್ನೆಟ್ ರೌಟರ್ನಲ್ಲಿಯೂ ಪಿನ್ ಇಟ್ಟುಕೊಳ್ಳಿ. ಸೆಕ್ಯೂರಿಟಿ ಇಲ್ಲವಾದರೆ ನಿಮ್ಮ ಡಿವೈಸ್ಗೆ ಸುಲಭವಾಗಿ ಎಂಟ್ರಿ ಪಡೆಯುವುದಲ್ಲದೇ ನಿಮ್ಮ ಮಾಹಿತಿಗಳನ್ನು ಕಡಿಯಬಹುದಾಗಿದೆ. ಇದಲ್ಲದೇ ನೀವು ಕ್ರೋಮ್ನಲ್ಲಿ ಬ್ರೌಸ್ ಮಾಡುವ ಸಂದರ್ಭದಲ್ಲಿ ಸೆಕ್ಯೂರ್ ಇರುವ ವೆಬ್ ತಾಣಗಳನ್ನು ಮಾತ್ರವೇ ಆಕ್ಸಿಸ್ ಮಾಡಿ. ನಾಟ್ ಸೆಕ್ಯೂಟರ್ ಎನ್ನುವ ತಾಣಗಳಿಗೆ ಭೇಟಿ ನೀಡಬೇಡಿ. ಅಲ್ಲದೇ ಆಶ್ವರ್ಯ ಕರ ಚಿನ್ಹೆ ಇರುವ ವೆಬ್ ತಾಣಗಳಿಗೆ ಹೋಗದರಿರುವುದು ಸುರಕ್ಷಿತ.
Comments