ಇಲ್ಲಿದೆ ನೋಡಿ ಕೆಲವು ವಾಟ್ಸ್ ಅಪ್ ಟಿಪ್ಸ್ ಗಳು
ವಾಟ್ಸ್ ಅಪ್ ನಿರಂತರವಾಗಿ ನವೀಕರಣಗೊಳ್ತಿದೆ. ಮೊದಲು ನೀವು ಕಳಿಸಿದ ಸಂದೇಶವನ್ನು ಬೇರೆಯವರು ಓದಿದ್ರಾ ಇಲ್ವಾ ಎಂಬುದು ಗೊತ್ತಾಗ್ತಿರಲಿಲ್ಲ. ನಂತ್ರ ವಾಟ್ಸ್ ಅಪ್ ಅಪ್ಡೇಟ್ ಆಯ್ತು. ಈಗ ನೀವು ಕಳುಹಿಸಿದ ಸಂದೇಶವನ್ನು ಯಾರಾದ್ರೂ ಓದಿದ್ರಾ ಎಂಬುದು ಸುಲಭವಾಗಿ ತಿಳಿಯುತ್ತದೆ. ಎರಡು ನೀಲಿ ಟಿಕ್ ಬರುತ್ತದೆ.
ಕೆಲವೊಮ್ಮೆ ಕೆಲವೊಬ್ಬರ ಸಂದೇಶವನ್ನು ನೀವು ಓದ ಬಯಸ್ತೀರಿ. ಆದ್ರೆ ಕಳುಹಿಸಿದವರಿಗೆ ತಿಳಿಯಬಾರದು ಎಂಬ ಆಸೆ ನಿಮಗಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟ್ರಿಕ್ ಉಪಯೋಗಿಸಿ. ಆಗ ನೀವು ಸಂದೇಶ ಓದಿದ್ದೀರಿ ಎಂಬುದು ನಿಮಗೆ ಸಂದೇಶ ಕಳುಹಿಸಿದವರಿಗೆ ತಿಳಿಯೋದಿಲ್ಲ.
ಮೊದಲು ನಿಮ್ಮ ಫೋನನ್ನು ಫ್ಲೈಟ್ ಮೂಡ್ ಗೆ ಹಾಕಿ. ನಂತ್ರ ವೈಫೈ ಬಂದ್ ಮಾಡಿ. ಈಗ ವಾಟ್ಸ್ ಅಪ್ ಅಪ್ಲಿಕೇಷನ್ ಗೆ ಹೋಗಿ ಸಂದೇಶವನ್ನು ಓದಿ. ಸಂದೇಶ ಓದಿ ಮುಗಿದ ನಂತ್ರ ಎಲ್ಲ ಅಪ್ಲಿಕೇಷನ್ ಬಂದ್ ಮಾಡಿ. ಮತ್ತೆ ಫೋನನ್ನು ಫ್ಲೈಟ್ ಮೂಡಿನಿಂದ ನಾರ್ಮಲ್ ಗೆ ತಂದು ವೈಫೈ ಆನ್ ಮಾಡಿ. ಹೀಗೆ ಮಾಡಿದ್ರೆ ನೀವು ಸಂದೇಶವನ್ನು ಓದಿದ್ದೀರಾ? ಇಲ್ವಾ? ಎಂಬುದು ಸಂದೇಶ ಕಳುಹಿಸಿದವರಿಗೆ ತಿಳಿಯೋದಿಲ್ಲ.
Comments