ಬಂಗಾರ ಕೊಳ್ಳುವವರಿಗೆ ಕೊಂಚ ಸಿಹಿ ಸುದ್ದಿ..!!
ಬಂಗಾರವೆಂದರೆ ಕೊಳ್ಳದೆ ಇರುವವರುಂಟೆ, ಎಲ್ಲರಿಗೂ ಚಿನ್ನ ಎಂದರೆ ಬಹಳ ಪ್ರೀತಿ ಅದರಲ್ಲೂ ಮಹಿಳೆಯರಿಗೆ ಅಂತೂ ಚಿನ್ನದ ವ್ಯಾಮೋಹವೇ ಹೆಚ್ಚು. ದಿನದಿಂದ ದಿನದಕ್ಕೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮಾಮೂಲಿಯಾಗಿಹೋಗಿದೆ. ಆದರೆ ಈ ಬರಿ ಸ್ವಲ್ಪ ನಿಇಟ್ಟುಸಿರು ಬಿಡುವಷ್ಟು ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ.
ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 58 ರು.ಗಳಷ್ಟು ಇಳಿಕೆಯಾಗಿದೆ. ಇದರಿಂದ ಸದ್ಯ 10 ಗ್ರಾಂ ಚಿನ್ನದ ಬೆಲೆ 30,241 ರು.ನಷ್ಟಾಗಿದೆ. ಶುಕ್ರವಾರ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಕೊಂಚ ಮಟ್ಟಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಲೆಯಲ್ಲಿಯೂ ಕೂಡ ಅಲ್ಪ ಪ್ರಮಾಣದ ಕುಸಿತವಾಗಿದೆ ಎನ್ನಲಾಗಿದೆ. ಇದರಿಂದ ಚಿನ್ನದ ಬೆಲೆಯಲ್ಲಿ 0.19ರಷ್ಟು ಕಡಿಮೆಯಾದಂತಾಗಿದೆ. ಮಾರುಕಟ್ಟೆ ಟ್ರೆಂಡ್ ಕಡಿಮೆಯಾಗಿರುವುದೇ ಬೆಲೆ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Comments