ತಂಪು ಪಾನೀಯ ಕುಡಿಯುವ ಮುನ್ನ ಒಮ್ಮೆ ಈ ಸುದ್ದಿ ಗಮನಿಸಿ...!

ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆಯ ಬೇಗೆಗೆ ಸೋತು ಹೋಗುತ್ತಿರುವ ರಾಜ್ಯದ ಜನತೆ ತಮ್ಮ ದಣಿವಾರಿಸಿಕೊಳ್ಳುವ ಸಲುವಾಗಿ ತಂಪು ಪಾನೀಯಗಳತ್ತ ಚಿತ್ತ ಹರಿಸಲು ಆರಂಭಿಸಿದ್ದಾರೆ. ಹೀಗೆ ಕುಡಿಯುವ ಪ್ರಖ್ಯಾತ ಕಂಪನಿಗಳ ಪಾನೀಯಗಳ ಬಾಟಲಿಗಳಲ್ಲಿ ಜೀವಕ್ಕೆ ಕುತ್ತು ತರಬಹುದಾದ ಕೆಲ ಅಂಶಗಳ ಮಾಹಿತಿ ಕಂಡುಬಂದಿದೆ.
ತಂಪು ಪಾನೀಯದ ಬಾಟಲಿಯಲ್ಲಿರುವ ಹುಳುಗಳನ್ನು ಪತ್ತೆಯಾಗಿವೆ. ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ. ತಾಳಿಕೋಟೆಯಲ್ಲಿನ ಅಂಗಡಿಯೊಂದರಲ್ಲಿ ಮಾರಟವಾಗುತ್ತಿದ್ದ ಪ್ರಖ್ಯಾತ ಕಂಪನಿಯ ತಂಪು ಪಾನೀಯದ ಬಾಟಲಿನಲ್ಲಿ ಹುಳುಗಳು ಪತ್ತೆಯಾಗಿವೆ. ಕೂಡಲೇ ಈ ಬಗ್ಗೆ ಅಂಗಡಿ ಮಾಲೀಕ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹುಳುಗಳು ಪತ್ತೆಯಾಗಿರುವ ಬಾಟಲಿಗಳನ್ನು ವಶಕ್ಕೆ ಪಡೆಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎಂದು ತಿಳಿದು ಬಂದಿದೆ.
Comments