ಸಾರ್ವಜನಿಕರ ಗಮನಕ್ಕೆ: ಮಾರ್ಚ್ 19 ರಂದು ಕ್ಯಾಬ್ ಚಾಲಕರ ಮುಷ್ಕರ

ದೇಶದ ವಿವಿಧೆಡೆಯಲ್ಲಿನ ಓಲಾ ಹಾಗೂ ಉಬರ್ ಕಂಪನಿಗಳಲ್ಲಿನ ಕೆಟ್ಟ ಆಡಳಿತ ನಿರ್ವಹಣೆಯಿಂದಾಗಿ ಚಾಲಕರ ಆದಾಯಕ್ಕೆ ಕಡಿವಾಣ ಬಿದ್ದಿದೆ.ಮೊದಲು ಭರವಸೆ ನೀಡಿದಂತೆ ವಾರ್ಷಿಕ ಕನಿಷ್ಟ 1.25 ಲಕ್ಷ ರೂಪಾಯಿ ಆದಾಯ ಬರುವಂತೆ ಈ ಕಂಪನಿಗಳು ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹಾಗಾಗಿ ಮಾರ್ಚ್ 19ರಂದು ಮುಷ್ಕರ ಕೈಗೊಳ್ಳುವ ನಿರ್ಧಾರ ಮಾಡಿರುವ ಚಾಲಕರು ತಮ್ಮ ಮುಷ್ಕರ ಅನಿರ್ದಿಷ್ಟಾವಧಿ ವರೆಗೆ ಮುಂದುವರಿಯಬಹುದು ಅಂತಾ ಚಾಲಕರು ಹೇಳ್ತಿದ್ದಾರೆ. ಮುಷ್ಕರದ ಪರಿಣಾಮ ಹೆಚ್ಚಾಗಿ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಗುರ್ಗಾಂವ್ ಹೆಚ್ಚಾಗಿರಲಿದೆ ಎಂದು ಹೇಳಲಾಗುತ್ತಿದೆ. ಓಲಾ ಹಾಗೂ ಉಬರ್ ಕಚೇರಿ ಎದುರು ಕುಟುಂಬ ಸಮೇತ ಧರಣಿ ಕೂರುವುದಾಗಿ ಚಾಲಕರು ಹೇಳಿದ್ದಾರೆ. ಬೆಳಗ್ಗೆ 8 ಗಂಟೆಯಿಂದ್ಲೇ ಮುಷ್ಕರ ಆರಂಭವಾಗಲಿದೆ.
Comments