ಕೆಜಿಎಫ್ ಹಗರಣದಲ್ಲಿ ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಭಾಗಿ : ಹಿರೇಮಠ್ ಆರೋಪ

ಕೆಜಿಎಫ್ ಹಗರಣದಲ್ಲಿ ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಅವರೂ ಭಾಗಿಯಾಗಿದ್ದಾರೆಂದು ಸಮಾಜಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರು ಆರೋಪಿಸಿದ್ದಾರೆ.
ವಿಜಯ ಸಂಕೇಶ್ವರ್ ಟಿಕೆಟ್ ತಪ್ಪಿದ ಕಾರಣ ಉಂಟಾಗಿದ್ದ ಗೊಂದಲ ಪರಿಹಾರವಾಗುತ್ತಿದ್ದಂತೆ ರಾಜ್ಯ ಸಭಾ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ತಲೆಗೆ ಮತ್ತೊಂದು ವಿವಾದ ಅಂಟಿಕೊಂಡಿದೆ. ಹುಬ್ಬಳ್ಳಿಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಕೆಜಿಎಫ್ ನ 2.16 ಎಕರೆ ಭೂಮಿಯನ್ನು ವಾಣಿಜ್ಯ ಉದ್ಯಮದ ಉದ್ದೇಶಕ್ಕಾಗಿ ರಾಜೀವ್ ಚಂದ್ರಶೇಖರ್ ಬಳಕೆ ಮಾಡಿದ್ದಾರೆ. ಈ ಭೂಮಿಯನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಇಂತಹವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಬಾರದು ಎಂದ ಎಸ್.ಆರ್. ಹಿರೇಮಠ್ ಒತ್ತಾಯಿಸಿದ್ದಾರೆ.
Comments