ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ನೋಡಿ, ಹಣಕ್ಕಾಗಿ ತತ್ತರಿಸುತ್ತಿರುವ ಜನ

ಈ ಹಿಂದೆ ನೋಟ್ ಬ್ಯಾನ್ ಆದಾಗ ಹಣಕ್ಕಾಗಿ ಜನ ಪರಿತಪಿಸುತ್ತಿದ್ದರು. ಈಗ ಇನ್ನೇನ್ನು ಹಣದ ಕೊರತೆ ಸರಿ ಹೋಯಿತು ಎಂದು ಹೇಳುವಷ್ಟರಲ್ಲಿ ಮತ್ತೆ ಎಲ್ಲಾ ಕಡೆ ಎ.ಟಿ.ಎಂ.ಗಳಲ್ಲಿ ಹಣದ ಕೊರತೆ ಎದುರಾಗಿದೆ.ಹಲವು ಎ.ಟಿ.ಎಂ.ಗಳನ್ನು ಮುಚ್ಚಲಾಗಿದೆ. ಇದೇನಪ್ಪ ಇದು ಮತ್ತೆ ನೋಟ್ ಬ್ಯಾನ್ ಆಗಿದ್ಯಾ..?
ಅದಕ್ಕೆ ಹಣ ಸಿಗ್ತಿಲ್ವ ಅಂತ ಅನ್ಕೊಂಡ್ರಾ, ನೋಟ್ ಬ್ಯಾನ್ ಆಗಿಲ್ಲ ಆದ್ರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕಾರಣಿಗಳು ಹಣವನ್ನು ಸಂಗ್ರಹಿಸುತ್ತಿದ್ದು, ಇದೇ ಕಾರಣಕ್ಕೆ ಎ.ಟಿ.ಎಂ.ಗಳಲ್ಲಿ ಹಣ ಸಿಗ್ತಿಲ್ಲ ಎಂಬ ಮಾತು ಕೇಳಿ ಬಂದಿವೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇದೆ. ಇದರೊಂದಿಗೆ ಚುನಾವಣಾ ಆಯೋಗ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲಿದೆ. ಈ ಕಾರಣದಿಂದ ಮೊದಲೇ ಹಣ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ನಗದು ಕೊರತೆ ಎದುರಾಗಿದೆ. ಚುನಾವಣೆ ಸಮೀಪಿಸುತ್ತಿರುವಂತೆ ಇನ್ನೂ ನಗದು ಕೊರತೆ ಎದುರಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎ.ಟಿ.ಎಂ.ಗಳಿಗೆ ಹಣ ತುಂಬಿಸಿದ ಕೆಲವೇ ಸಮಯದಲ್ಲಿ ಖಾಲಿಯಾಗ್ತಿದೆ. ಮುಂದೆ ಹಣ ಬೇಕಾದಲ್ಲಿ ನೇರವಾಗಿ ತಮ್ಮ ಖಾತೆ ಇರುವ ಬ್ಯಾಂಕ್ ಗೆ ಪಾಸ್ ಬುಕ್ ನೊಂದಿಗೆ ಹೋಗಬೇಕಾಗುತ್ತದೆ. ನೋಟ್ ಬ್ಯಾನ್ ಆದಾಗ ಹೇಗೆ ಜನ ಪರಿತಪಿಸುತ್ತಿದ್ದರೋ ಅದೇ ರೀತಿ ಚುನಾವಣೆಯ ಸಮಯದಲ್ಲೂ ಈ ಸಮಸ್ಯೆ ಮತ್ತೊಮ್ಮೆ ಎದುರಾಗಲಿದೆ.
Comments