ನೋಬೆಲ್ ಪುರಸ್ಕೃತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

14 Mar 2018 12:11 PM | General
419 Report

ನೋಬೆಲ್ ಪುರಸ್ಕೃತ ಭೌತವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ (76) ನಿಧನರಾಗಿದ್ದಾರೆ. ಪಾರ್ಶ್ವವಾಯುಗೆ ಒಳಗಾಗಿದ್ದ ಹಾಕಿಂಗ್ ವಿಶೇಷ ಯಂತ್ರದ ಮೂಲಕ ಮಾತನಾಡುತ್ತಿದ್ದರು. ಬ್ಲಾಕ್ ಹೋಲ್, ಕ್ವಾಂಟಮ್ ಮೆಕ್ಯಾನಿಸಮ್ ಹಾಗೂ ಸಾಪೇಕ್ಷತಾ ಸಿದ್ಧಾಂತದ ಕುರಿತ ಸಂಶೋಧನೆಗೆ ಪ್ರಸಿದ್ಧಿ ಹಾಕಿಂಗ್ ಪಡೆದುಕೊಂಡಿದ್ದರು. ಅನೇಕ ಪುಸ್ತಕಗಳನ್ನು ರಚಿಸಿದ್ದ ಅವರ `ಎ ಬ್ರೀಫ್ ಇಸ್ಟರಿ ಆಫ್ ಟೈಂ' ಪುಸ್ತಕ ವಿಶ್ವದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪತ್ನಿ ಲಕ್ಕಿ, ಮಕ್ಕಳಾದ ರಾಬರ್ಟ್ ಹಾಗೂ ಟಿಮ್‌ರನ್ನು ಹಾಕಿಂಗ್ ಅಗಲಿದ್ದಾರೆ. 

ಸಾವಿಗೆ ನಿಖರ ಕಾರಣ ತಿಳಿಸದ ಕುಟುಂಬ, ಅವರು ಶಾಂತಿಯಿಂದ ಸಾವನ್ನಪ್ಪಿದ್ದಾರೆ ಎಂದಷ್ಟೇ ಹೇಳಿಕೆ ನೀಡಿದೆ. 1942 ಜನವರಿ 8ರಂದು ಇಂಗ್ಲೆಂಡ್‌ನಲ್ಲಿ ಜೀವಶಾಸ್ತ್ರಜ್ಞ, ಸಂಶೋಧಕ ಡಾ. ಫ್ರಾಂಕ್‌ ಹಾಕಿಂಗ್ ಹಾಗೂ ಐಸೊಬೆಲ್ ಮಗನಾಗಿ ಸ್ಟೀಫನ್‌ ಹಾಕಿಂಗ್‌ ಜನಿಸಿದರು. ಹಾಕಿಂಗ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಿಶ್ವಾದ್ಯಂತ ಪರಿಚಿತರು. ಟಿವಿ ಶೋ `ಇನ್ ಟು ಯುನಿವರ್ಸ್ ವಿತ್ ಸ್ಟೀಫನ್ ಹಾಕಿಂಗ್'ನಲ್ಲಿ ಸ್ಫೂರ್ತಿದಾಯಕ ಮಾತುಗಳಿಂದ ಹಾಕಿಂಗ್ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. 

Edited By

Shruthi G

Reported By

Shruthi G

Comments