ಹಳೆ ಕಾರು, ಬೈಕ್ ನಂಬರ್ ಪ್ರೇಮಿಗಳಿಗೊಂದು ಹೊಸ ಸುದ್ದಿ

ಹಳೆ ಬೈಕ್ ಅಥವಾ ಕಾರಿನ ನಂಬರನ್ನು ಹೊಸ ವಾಹನಕ್ಕೂ ಬಳಸಲು ಬಯಸುವವರಿಗಾಗಿ ಸಾರಿಗೆ ಇಲಾಖೆ ಹೊಸ ಪ್ರಸ್ತಾವನೆಯೊಂದನ್ನು ಅಂತಿಮಗೊಳಿಸಿದೆ. ಅತ್ಯಂತ ಸುಲಭವಾಗಿ ಇನ್ಮುಂದೆ ಹಳೆ ಗಾಡಿ ನಂಬರನ್ನು ಹೊಸ ವಾಹನಕ್ಕೆ ಪಡೆಯಬಹುದಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹಣ ನೀಡಿ ಹಳೆ ನಂಬರ್ ಪಡೆಯಬಹುದಾಗಿದೆ. ಕ್ಯಾಬಿನೆಟ್ ಒಪ್ಪಿಗೆ ನಂತ್ರ ಹೊಸ ಯೋಜನೆ ಜಾರಿಗೆ ಬರಲಿದೆ. ಹಳೆ ಗಾಡಿಯ ನಂಬರ್ ಹೊಸ ಗಾಡಿಗೆ ಬಯಸುವವರು 5000 ರೂಪಾಯಿ ನೀಡಬೇಕಾಗುತ್ತದೆ. ದ್ವಿಚಕ್ರ ವಾಹನದಾರರು 500 ರೂಪಾಯಿ ನೀಡಿದ್ರೆ ಸಾಕು. ಕಾರಿಗೆ ಸಾವಿರದಿಂದ 5 ಸಾವಿರ ರೂಪಾಯಿ ಫೀ ನಿಗದಿಪಡಿಸಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಈ ಹಿಂದೆ ಹಳೆ ವಾಹನದ ನಂಬರ್ ಕೇಳಿ ದಿನಕ್ಕೆ ಕೇವಲ 5-7 ಅರ್ಜಿಗಳು ಬರುತ್ತಿದ್ದವಂತೆ. ಆನ್ಲೈನ್ ಸೇವೆ ನಂತ್ರ ಜನರಿಗೆ ಈ ಬಗ್ಗೆ ಸುಲಭವಾಗಿ ತಿಳಿಯಲಿದೆ ಹಾಗೆ ಅವ್ರ ಕೆಲಸ ಕೂಡ ಸುಲಭವಾಗಲಿದೆ ಎನ್ನುತ್ತಿದೆ ಸಾರಿಗೆ ಇಲಾಖೆ.
Comments