ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : 6 ತಿಂಗಳ ತರಬೇತಿ ಪಡೆದು 50 ಸಾವಿರ ರೂ ಸಂಬಳ ಪಡೆಯಿರಿ

ಇತ್ತೀಚಿಗೆ ಹಲವು ವಲಯಗಳಲ್ಲಿ ಉದ್ಯೋಗಗಳು ಯುವಕರನ್ನು ಕೈ ಬಿಸಿ ಕರೆಯುತ್ತಿವೆ. ಹೌದು ಆಭರಣ ಉದ್ಯಮ ಭಾರತದ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಈ ಉದ್ಯಮಕ್ಕೆ ಯುವಕರು ಆಕರ್ಷಿತರಾಗ್ತಿದ್ದಾರೆ.
ವರದಿಯೊಂದರ ಪ್ರಕಾರ ಆಭರಣದ ರಫ್ತು 2000 ಡಾಲರ್ ತಲುಪುವ ಸಾಧ್ಯತೆಯಿದೆಯಂತೆ. 2022 ರ ವೇಳೆಗೆ 1 ಕೋಟಿ ಉದ್ಯೋಗ ಈ ವಲಯದಲ್ಲಿ ಸೃಷ್ಟಿಯಾಗಲಿದೆಯಂತೆ. ಆಭರಣ ವಿನ್ಯಾಸದಲ್ಲಿ ಕೆಲಸ ಬಯಸುವವರು ಕೆಲವೊಂದು ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ. ಮೊದಲನೇಯದಾಗಿ ಆಭರಣಗಳ ವಿನ್ಯಾಸದ ಬಗ್ಗೆ ಜ್ಞಾನವಿರಬೇಕು. ಸೃಶನಶೀಲತೆ, ಕಾಲ್ಪನಿಕತೆ, ಈಗಿನ ಫ್ಯಾಶನ್ ಜೊತೆ ಪರಿಶ್ರಮ ಮುಖ್ಯವಾಗುತ್ತದೆ. ಜಾಗತಿಕ ಮಾರುಕಟ್ಟೆ ಹಾಗೂ ಫ್ಯಾಷನ್ ಬಗ್ಗೆ ಆಸಕ್ತಿ ಹೊಂದಿರಬೇಕಾಗುತ್ತದೆ. ಬಂಗಾರ, ವಜ್ರದ ಆಭರಣಗಳ ವಿನ್ಯಾಸಕ್ಕೆ ಕೈ ಹಾಕುವವರು ಅದ್ರ ಬಗ್ಗೆ ತಿಳಿದಿರಬೇಕಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಡಿಪ್ಲೋಮಾ ಕೋರ್ಸ್, ಪದವಿ ಕೋರ್ಸ್ ಗಳಿವೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ-ದೆಹಲಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್-ಅಹಮದಾಬಾದ್, ಇಂಡಿಯನ್ ಇನ್ಸ್ಟಿಟ್ಯೂಟ್ ಜೆಮ್ಸ್ ಅಂಡ್ ಜ್ಯುವೆಲ್ಲರಿ-ಜೈಪುರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜ್ಯುವೆಲರಿ -ಮುಂಬೈ, ಸೇಂಟ್ ಕ್ಸೇವಿಯರ್ ಕಾಲೇಜ್ -ಮುಂಬೈ ಸೇರಿದಂತೆ ಅನೇಕ ಕಡೆ ಆಭರಣ ತಯಾರಿಕಾ ಕೋರ್ಸ್ ಗಳಿವೆ. ಈ ಕೋರ್ಸ್ ಗಳನ್ನು ಮುಗಿಸಿ ಆಭರಣ ತಯಾರಿಕಾ ಉದ್ಯಮಕ್ಕಿಳಿದ್ರೆ ತಿಂಗಳಿಗೆ 50 ಸಾವಿರ ಗಳಿಸುವ ಅವಕಾಶ ನಿಮಗೆ ಸಿಗಲಿದೆ.
Comments