ಖ್ಯಾತ ನಟಿ ಸಿಂಧು ಮೆನನ್ ವಿರುದ್ಧ ಎಫ್ಐಆರ್..?
ಸಿಂಧು ಮೆನನ್ ಹಾಗೂ ಕುಟುಂಬಸ್ಥರು ನಕಲಿ ದಾಖಲೆ ಸೃಷ್ಠಿಸಿ ಬರೋಡಾ ಬ್ಯಾಂಕ್ನಿಂದ ಸಾಲ ಪಡೆದಿದ್ದಾರೆ. ಕಾರು ಖರೀದಿಗಾಗಿ 36 ಲಕ್ಷ ರೂಪಾಯಿ ಲಕ್ಷ ಪಡೆದು ವಂಚಿಸಿದ್ದಾರೆ ಅಂತ ಬರೋಡಾ ಬ್ಯಾಂಕ್ ಮ್ಯಾನೇಜರ್ ರಮೇಶ್ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನಲೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆಯಲ್ಲಸಿಂಧು ಕುಟುಂಬಸ್ಥರು ನಕಲಿ ದಾಖಲೆ ನೀಡಿರುವುದು ಸಾಬೀತಾಗಿದೆ. ಸದ್ಯ ಅಮೇರಿಕಾದಲ್ಲಿರುವ ನಟಿ ಸಿಂಧು ಮೆನನ್ ಪ್ರಕರಣದ ಮೂರನೇ ಆರೋಪಿಯಾಗಿದ್ದಾರೆ. ಐಪಿಸಿ ಸೆಕ್ಷನ್ 420ರ ಅಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಸಿಂಧು ಮೆನನ್ಗೂ ಬಂಧನ ಭೀತಿ ಎದುರಾಗಿದೆ. ಸದ್ಯ, ಆರ್ಎಂಸಿ ಯಾರ್ಡ್ ಪೊಲೀಸರು ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ವಿಚಾರಣೆ ನಡೆಸುತ್ತಿದ್ದಾರೆ. ಸಿಂಧು ಮೆನನ್ ಕನ್ನಡದ ಖುಷಿ, ನಂದಿ, ವಿಕ್ರಮ್, ಚಿತ್ರಗಳಲ್ಲಿ ನಟಿಸಿದ್ದರು.
Comments