ಶಾಲಾ ವಿದ್ಯಾರ್ಥಿ ಗೆ ಸಲ್ಯೂಟ್ ಹೊಡೆದ ಪೊಲೀಸ್ ಕಮಿಷನರ್..!!
ನಗರ ಪೊಲೀಸ್ ಆಯಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಶಾಲಾ ವಿದ್ಯಾರ್ಥಿಯೊಬ್ಬ ಸಲ್ಯೂಟ್ ಹೊಡೆದಿದ್ದು, ಪ್ರತಿಯಾಗಿ ಕಮಿಷನರ್ ಕೂಡ ಸಲ್ಯೂಟ್ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತರ ಆರೋಗ್ಯ ವಿಚಾರಿಸಲು ಮಲ್ಯ ಅಸ್ಪತ್ರೆಗೆ ಭೇಟಿ ನೀಡಿದ್ದ ಸುನೀಲ್ ಕುಮಾರ್ ಹೊರಗೆ ಬರುತ್ತಿದ್ದರು.
ಅದೇ ವೇಳೆಗೆ ಶಾಲಾ ವಿದ್ಯಾರ್ಥಿಯೊಬ್ಬ ಎದುರಾಗಿದ್ದು, ಕಮಿಷನರ್ ಅವರನ್ನು ಕಂಡು ಸಲ್ಯೂಟ್ ಹೊಡೆದಿದ್ದಾನೆ. ಕೂಡಲೇ ಕಮಿಷನರ್ ವಿದ್ಯಾರ್ಥಿಗೆ ಸಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಿಷನರ್ ಸಲ್ಯೂಟ್ ಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments