'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸೂಚನೆ...!
ಹಳಿ ನಿರ್ವಹಣೆ ಕಾಮಗಾರಿಗಾಗಿ ಮಾ.10ರಂದು 45 ನಿಮಿಷ ಮುಂಚಿತವಾಗಿ ಸೇವೆ ಸ್ಥಗಿತಗೊಳ್ಳಲಿದೆ. ಮಾ.11ರಂದು ಎರಡೂವರೆ ಗಂಟೆ ತಡವಾಗಿ ಸೇವೆ ಆರಂಭವಾಗಲಿದೆ. ಇತ್ತೀಚೆಗೆ ಯಲಚೇನಹಳ್ಳಿ ನಿಲ್ದಾಣದ ಹಳಿ ಕ್ರಾಸ್ ಓವರ್ ಬಳಿ ಆತಂಕ ಸೃಷ್ಟಿಯಾಗಿತ್ತು.
ಈ ಭಾಗದಲ್ಲಿ ಒಂದು ದಿನ ಮೆಟ್ರೋ ಸೇವೆ ಸ್ಥಗಿತಗೊಳಿಸಿ ಕ್ರಾಸ್ ಓವರ್ ಬದಲಿಸಲಾಗಿತ್ತು, ಬಿರುಕು ಕಾಣಿಸಿಕೊಂಡ ನಂತರ ಕೆಲ ದಿನಗಳವರೆಗೆ ಇಡೀ ಮಾರ್ಗದಲ್ಲಿ ಹಳಿಯನ್ನು ಪರಿಶೀಲಿಸಲಾಗಿದೆ. ಈಗ ಮತ್ತೊಮ್ಮೆ ಹಳಿಯ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಕಾಮಗಾರಿ ನಡೆಸಲಾಗುತ್ತದೆ. ಇದಕ್ಕಾಗಿ ಮೆಟ್ರೋ ಸಂಚಾರವನ್ನು ಶನಿವಾರ ರಾತ್ರಿ 11ರ ಬದಲು 10.15ಕ್ಕೆ ಸ್ಥಗಿತಗೊಳಿಸಲಾಗುತ್ತದೆ. ಭಾನುವಾರ ಬೆಳಗ್ಗೆ 8 ಗಂಟೆ ಬದಲು 10.30ಗಂಟೆಗೆ ಸೇವೆ ಆರಂಬಿಸಲಾಗುತ್ತದೆ. ನಾಗಸಂದ್ರ, ಯಲಚೇನಹಳ್ಳಿ , ಬೈಯಪ್ಪನಹಳ್ಳಿ, ಮೈಸೂರು ರಸ್ತೆ ಟರ್ಮಿನಲ್ ನಿಲ್ದಾಣಗಳಲ್ಲಿ ಶನಿವಾರ ರಾತ್ರಿ 10.15ಕ್ಕೆ ಕೊನೆಯ ರೈಲು ಹೊರಡಲಿದೆ. ಇದೇ ನಿಲ್ದಾಣಗಳಿಂದ ಭಾನುವಾರ ಬೆಳಗ್ಗೆ 10.30ಕ್ಕೆ ಮೊದಲ ರೈಲು ಪ್ರಾರಂಭವಾಗಲಿದೆ.
Comments